ADVERTISEMENT

ಡ್ಯಾನ್ಸ್‌ಗೆ ಮರಳಿದ ನಟ ಗೋವಿಂದ: ಈ ಹಾಡು ಪುಷ್ಪಗಿಂತಲೂ ಭಯಂಕರ ಎಂದ ಅಭಿಮಾನಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 7:30 IST
Last Updated 9 ಜೂನ್ 2022, 7:30 IST
ಗೋವಿಂದ
ಗೋವಿಂದ   

ಮುಂಬೈ: ಬಾಲಿವುಡ್‌ ಸ್ಟಾರ್‌ ನಟ ಗೋವಿಂದ ಮತ್ತೆ ಡ್ಯಾನ್ಸ್‌ಗೆ ಮರಳಿದ್ದಾರೆ. ‘ಪ್ರೇಮ್‌ ಕರುಣ್‌ ಛೂ‘ ಎಂಬ ಹೆಸರಿನ ವಿಡಿಯೊ ಆಲ್ಬಂ ಬಿಡುಗಡೆ ಮಾಡಿದ್ದಾರೆ.

ಸದ್ಯ ಅವರ ‘ಪ್ರೇಮ್‌ ಕರುಣ್‌ ಛೂ‘ ವಿಡಿಯೊ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ನಟಿ ಜೂಹೀ ಖಾನ್‌ ಜೊತೆ ಗೋವಿಂದ ಮಸ್ತ್‌ ಡ್ಯಾನ್ಸ್‌ ಮಾಡಿದ್ದಾರೆ.

80–90ರ ದಶಕದಲ್ಲಿ ಗೋವಿಂದ ಅವರ ಬಾಲಿವುಡ್‌ ಸಿನಿಮಾಗಳು ಹೆಚ್ಚು ಜನಪ್ರಿಯತೆ ಪಡೆದಿದ್ದವು. ವರ್ಷಕ್ಕೆ 5 ರಿಂದ 6 ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಡ್ಯಾನ್ಸ್‌ ಮತ್ತು ಹಾಸ್ಯದ ಮೂಲಕ ಅವರು ಬಾಲಿವುಡ್‌ನಲ್ಲಿ ಖ್ಯಾತರಾಗಿದ್ದರು.

ADVERTISEMENT

ಸದ್ಯ ನೂತನ ಸಿನಿಮಾ ನಿರ್ಮಿಸುತ್ತಿರುವುದಾಗಿಹೇಳಿದ್ದಾರೆ. ಗೋವಿಂದ ಅವರ ಹೇಳಿಕೆಯಿಂದ ಅಭಿಮಾನಿಗಳು ಖುಷ್‌ ಆಗಿದ್ದಾರೆ. ಈ ವಿಡಿಯೊ ಹಾಡು ನೋಡಿರುವ ಅಭಿಮಾನಿಯೊಬ್ಬರು ‘ ಈ ಹಾಡು ಪುಷ್ಪಗಿಂತಲೂ ಭಯಂಕರ‘ವಾಗಿದೆ ಎಂದು ಹೇಳಿದ್ದಾರೆ.

‘ಪ್ರೇಮ್‌ ಕರುಣ್‌ ಛೂ‘ ಹಾಡಿಗೆ ಗಣೇಶ್‌ ಆಚಾರ್ಯ ನೃತ್ಯ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.