ADVERTISEMENT

‘ಹ್ಯಾಂಗ್‌ ಓವರ್’ ಟ್ರೇಲರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2018, 10:47 IST
Last Updated 9 ಜುಲೈ 2018, 10:47 IST
‘ಹ್ಯಾಂಗ್‌ ಓವರ್‌’ ಚಿತ್ರ ತಂಡ
‘ಹ್ಯಾಂಗ್‌ ಓವರ್‌’ ಚಿತ್ರ ತಂಡ   

ಕುಡಿದ ಮತ್ತಿನಲ್ಲಿ ಹಲವು ರಾದ್ಧಾಂತ ಸೃಷ್ಟಿಯಾಗುತ್ತವೆ. ಅಮಲಿನಲ್ಲಿ ಇದ್ದಾಗ ಇದರ ಪರಿವೇ ಇರುವುದಿಲ್ಲ. ಇಂತಹ ಕಥೆಯನ್ನೇ ನಿರ್ದೇಶಕ ವಿಠಲ್‌ ಭಟ್‌ ‘ಹ್ಯಾಂಗ್‌ ಓವರ್’ ಸಿನಿಮಾದಲ್ಲಿ ಹೇಳಲು ಹೊರಟಿಸಿದ್ದಾರೆ.

ಮೂವರು ಹುಡುಗರು ಮತ್ತು ಹುಡುಗಿಯರು ಮೋಜು ಮಾಡಲು ಫಾರ್ಮ್‌ಹೌಸ್‍ವೊಂದಕ್ಕೆ ತೆರಳುತ್ತಾರೆ. ಅಲ್ಲಿ ಎಲ್ಲರೂ ಎಂಜಾಯ್ ಮಾಡುತ್ತಾರೆ. ತಡರಾತ್ರಿಯಾಗಿದ್ದರಿಂದ ಅಲ್ಲಿಯೇ ತಂಗುತ್ತಾರೆ. ಬೆಳಿಗ್ಗೆ ಎದ್ದು ನೋಡಿದ ತಕ್ಷಣ ಸ್ನೇಹಿತೆಯೊಬ್ಬಳು ಸೋಫಾದ ಮೇಲೆ ಹೆಣವಾಗಿರುತ್ತಾಳೆ. ಕುಡಿದ ಹ್ಯಾಂಗೋವರ್‌ನಲ್ಲಿ ಅವರು ಎಲ್ಲವನ್ನು ಮರೆತಿರುತ್ತಾರೆ.

ಬಳಿಕ ಒಂದೊಂದೇ ಸನ್ನಿವೇಶಗಳು ನೆನಪಿಗೆ ಬರುತ್ತವೆ. ಇದನ್ನೇ ಫ್ಲಾಶ್‌ಬ್ಯಾಕ್‌ನಲ್ಲಿ ಹೇಳಿದ್ದಾರೆ ನಿರ್ದೇಶಕರು. ಬೆಂಗಳೂರು, ಮೈಸೂರು ಮತ್ತು ಊಟಿಯಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇತ್ತೀಚೆಗೆ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿತು.

ADVERTISEMENT

ಚೇತನ್‍ ಬಹದ್ದೂರ್, ಕೃಷ್ಣ ಸಾಹಿತ್ಯದ ಎರಡು ಹಾಡುಗಳಿಗೆ ವೀರ್‌ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಭರತ್, ರಾಜ್, ಚಿರಾಗ್, ಸಹನ್‍ ಪೊನ್ನಮ್ಮ ಮತ್ತು ನಂದಿನಿ ನಟರಾಜ್, ಕೆ.ಎಸ್. ಶ್ರೀಧರ್, ನೀನಾಸಂ ಅಶ್ವಥ್, ಯತಿರಾಜ್, ಸ್ಪಂದನಾ ಪ್ರಸಾದ್, ಕೈಲಾಶ್‍ ನೀನಾಸಂ ತಾರಾಗಣದಲ್ಲಿದ್ದಾರೆ.

ಒಂದು ಹಾಡಿಗೆ ನಟಿ ನೀತು ಶೆಟ್ಟಿ ಹೆಜ್ಜೆ ಹಾಕಿದ್ದಾರೆ. ಟಾಲಿವುಡ್‍ನ ಶಫಿ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಹಣ ಅಕಿರ ಯೋಗಿ ಅವರದ್ದು. ಡಿ. ರಾಕೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.