ADVERTISEMENT

ನಯನತಾರಾಗೆ 35ರ ಸಂಭ್ರಮ: ಪ್ರಿಯಕರನ ಜತೆ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 7:55 IST
Last Updated 18 ನವೆಂಬರ್ 2019, 7:55 IST
ನಯನತಾರಾ
ನಯನತಾರಾ   

ಬೆಂಗಳೂರು:ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರಿಗೆ ಇಂದು (ನ.18) 35ನೇ ವರ್ಷದ ಹುಟ್ಟುಹಬ್ಬಸಂಭ್ರಮ. ಈಬಾರಿ ಪ್ರಿಯಕರನ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷ.

ಈ ಸಲ ವಿಶೇಷವಾಗಿ ಜನ್ಮದಿನವನ್ನು ಆಚರಿಸಿಕೊಳ್ಳಬೇಕು ಎಂದು ಪ್ಲಾನ್‌ ಮಾಡಿದ್ದ ನಯನತಾರ, ಪ್ರಿಯಕರವಿಜ್ಞೇಶ್ ಶಿವನ್ ಜೊತೆ ನ್ಯೂರ್ಯಾಕ್‌ಗೆ ತೆರಳಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದ್ಯದಲ್ಲೇ ಈ ಜೋಡಿ ಮದುವೆಯಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಸೈರಾ ನರಸಿಂಹ ರೆಡ್ಡಿ ಹಾಗೂ ಬಿಗಿಲ್‌ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು. ಈ ಎರಡು ಸಿನಿಮಾಗಳು ಭರ್ಜರಿ ಯಶಸ್ಸುಗಳಿಸುವ ಮೂಲಕ ನಯನತಾರಾಗೆ ಉತ್ತಮಹೆಸರು ತಂದುಕೊಟ್ಟಿವೆ. ಇದೀಗ ರಜನಿಕಾಂತ್ ನಾಯಕನಾಗಿ ನಟಿಸುತ್ತಿರುವದರ್ಬಾರ್ ಸಿನಿಮಾದಲ್ಲಿ ನಯನ ನಟಿಸುತ್ತಿದ್ದಾರೆ.

ADVERTISEMENT

ಕಳೆದ 16 ವರ್ಷಗಳಿಂದ ನಯನತಾರಾ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. 2003ರಲ್ಲಿ ನಯನತಾರಾ ಬೆಳ್ಳಿ ಪರದೆ ಪ್ರವೇಶ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.