ADVERTISEMENT

ಮನೆಯಲಿ ಕೊಡೋ ತಗೊಳೋ ಮಾತುಕತೆ!

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 19:45 IST
Last Updated 6 ಏಪ್ರಿಲ್ 2020, 19:45 IST
ಹರಿಪ್ರಿಯಾ
ಹರಿಪ್ರಿಯಾ   

‘ನಮ್ಮನೇಲಿ ನಡೀತು ಕೊಡೋ ತಗೊಳೋ ಮಾತುಕತೆ’

–ನಟಿ ಹರಿಪ್ರಿಯಾ ಅವರು ಬ್ಲಾಗ್‌ನಲ್ಲಿ ಬರೆದಿರುವ ಈ ಬರಹ ಅವರ ಅಭಿಮಾನಿಗಳಲ್ಲಿ ಕುತೂಹಲದ ಕೇಂದ್ರಬಿಂದುವಾಗಿದೆ.

ಕೊರೊನಾ ಸೋಂಕಿನ ಭೀತಿಯ ನಡುವೆ ಅವರು ಮದುವೆಯಾಗಲು ತಯಾರಿ ನಡೆಸಿದ್ದಾರೆಯೇ ಎಂಬುದು ಹಲವರ ಪ್ರಶ್ನೆ. ಆದರೆ,ಅವರು ಕೊರೊನಾ ಭೀತಿಯಿಂದ ಆಗಿರುವ ಪರಿಣಾಮದ ಬಗ್ಗೆ ಬರೆದ ಬರಹ ಹೀಗಿದೆ:

ADVERTISEMENT

‘ಈಗ ಎಲ್ಲಿ ನೋಡಿದ್ರೂ ಕೊಡೋ ತಗೋಳೋ ಮಾತುಕತೆ. ಇಡೀ ದೇಶಾನೇ ಲಾಕ್‌ಡೌನ್ ಆಗಿದೆ. ಇರೋ ಮದ್ವೆಗಳೇ ಮುಂದಕ್ ಹೋಗಿವೆ. ಈಗ ಯಾರು ಕೊಡೋ ತಗೋಳೋ ವಿಷಯ ಮಾತಾಡ್ತಾರೆ ಅಂದ್ಕೋಬೇಡಿ. ಪರಿಸ್ಥಿತಿ ಹೇಗೇ ಇದ್ರೂ ಈಗ ಆ ಮಾತುಕತೆ ನಡೀತಿರೋದಂತೂ ಪಕ್ಕಾ. ನಮ್ಮನೇಲೇ ಅಂಥ ಮಾತುಕತೆ ನಡ್ದಿದೆ. ಹ್ಹಹ್ಹಹ್ಹ… ಮದ್ವೆ ಅಂದ್ಕೊಂಡ್ರಾ? ಅಲ್ವೇ ಅಲ್ಲ. ಅದ್ಕೆ ಕಾರಣ, ಮತ್ತೆ ಅದೇ ಕೊರೊನಾ!!

ನೀವು ‘ಲವ್ ಇನ್ ದ ಟೈಮ್ ಆಫ್ ಕಾಲರಾ’ ಅಂತ ನಾವೆಲ್ ಬಗ್ಗೆ ಕೇಳಿದ್ದೀರಲ್ವ? ಅದೇ ಥರ ಇದು. ‘ಎಕ್ಸ್‌ಚೇಂಜ್ ಇನ್ ದ ಟೈಮ್ ಆಫ್ ಕೊರೊನಾ’ ಅಂತ ಹೇಳ್ಬೋದು. ಯಾಕ್ ಗೊತ್ತಾ? ಈಗ ಎಲ್ಲ ಬಂದ್ ಆಗಿದೆ. ಎಷ್ಟ್ ದುಡ್ಡ್‌ ಕೊಡ್ತೀವಿ ಅಂದ್ರೂ ಕೆಲವಂತೂ ಸಿಗ್ತಾನೇ ಇಲ್ಲ. ಕೆಲವು ಅಂಗಡಿಗಳು ಓಪನ್ ಇದ್ರೂ ಸ್ಟಾಕ್ ಇಲ್ಲ.

ಹಿಂದಿನ ಕಾಲದಲ್ಲಿ ಬಾರ್ಟರ್ ಸಿಸ್ಟಂ ಅಂತ ಇತ್ತಂತಲ್ವಾ, ಆ ಥರ ನಮ್ ಮನೇಲೂ ಕೊಡೋ ತಗೊಳೋ‌ ಮಾತುಕತೆ ಈ ಕ್ವಾರಂಟೈನ್‌ ಟೈಮಲ್ಲಿ ನಡ್ದಿತ್ತು. ನನ್ ಫ್ರೆಂಡ್ ಮನೆ ನಾಯಿಗಳಿಗೆ ಡಾಗ್‌ಫುಡ್ ಇರ್ಲಿಲ್ಲ. ಅವರು ನಮ್ ಮನೆ ಅಕ್ವೇರಿಯಮ್‌ನಲ್ಲಿರೋ ಮೀನುಗಳಿಗೆ ಫಿಷ್‌ಫುಡ್ ಕೊಟ್ಟು ಡಾಗ್‌ಫುಡ್ ತಗೊಂಡ್ ಹೋದ್ರು. ಹಾಗೇ ತುಂಬಾ ಕಡೆ ತುಂಬಾ ವಸ್ತು ಎಕ್ಸ್‌ಚೇಂಜ್ ಮಾಡ್ಕೊಂಡಿದ್ದು ಕೇಳಿದ್ದೆ.

ಹಣ ಇದ್ರೆ ಸಾಕು, ಏನು ಬೇಕಾದ್ರೂ ತಗೋಬಹುದು ಅನ್ನೋದು ಸುಳ್ಳು. ಹಣಕ್ಕಿಂತ ಆ ದಿನದ ಅಗತ್ಯ ಪೂರೈಸಿಕೊಳ್ಳೋದೇ ಮುಖ್ಯ ಅಂತ ಇದರಿಂದ ಎಲ್ಲರಿಗೂ ಗೊತ್ತಾಗ್ತಿದೆ ಅನ್ನೋದೇ ದೊಡ್ಡ ಖುಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.