ಭೀಮರಾವ್ ಪಿ. ನಿರ್ದೇಶನದ ‘ಹೆಬ್ಬುಲಿ ಕಟ್’ ಸಿನಿಮಾ ಶೀಘ್ರದಲ್ಲೇ ಒಟಿಟಿಗೆ ಬರಲಿದೆ. ಸಿನಿಮಾವನ್ನು ಆ.8ರಿಂದ ಸನ್ ನೆಕ್ಸ್ಟ್‌ನಲ್ಲಿ ವೀಕ್ಷಿಸಬಹುದಾಗಿದೆ.
ನಟ ನೀನಾಸಂ ಸತೀಶ್ ಪ್ರಸ್ತುತಪಡಿಸಿದ್ದ ಈ ಸಿನಿಮಾದಲ್ಲಿ ಮೌನೇಶ್ ನಟರಂಗ, ಅನನ್ಯ, ಮಹಾದೇವ ಹಡಪದ, ಉಮಾ ವೈ.ಜಿ., ವಿನಯ್ ಮಹಾದೇವನ್, ಮಹಂತೇಶ್ ಹಿರೇಮಠ, ಪುನೀತ್ ಶೆಟ್ಟಿ ಮತ್ತಿತರರು ನಟಿಸಿದ್ದಾರೆ. ಅಸ್ಪೃಶ್ಯತೆ, ಜಾತಿ ತಾರತಮ್ಯ, ದಬ್ಬಾಳಿಕೆಯ ಘಟನೆಗಳ ಚಿತ್ರಣಗಳಿಗೆ ಕಮರ್ಷಿಯಲ್ ಸ್ಪರ್ಶ ನೀಡಿ ‘ಹೆಬ್ಬುಲಿ ಕಟ್’ ಸಿನಿಮಾ ಹೆಣೆದಿದ್ದರು ನಿರ್ದೇಶಕರು. ‘ಹೆಬ್ಬುಲಿ’ ಸಿನಿಮಾದಲ್ಲಿ ನಟ ಸುದೀಪ್ ಅವರು ಮಾಡಿಕೊಂಡಿದ್ದ ಕೇಶವಿನ್ಯಾಸ ಚಿತ್ರದ ನಾಯಕಿಗೆ ಇಷ್ಟ. ಇದನ್ನರಿತ ನಾಯಕ ಆ ರೀತಿ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಮುಂದಾಗುತ್ತಾನೆ. ಮುಂದಿನ ಘಟನೆಗಳೇ ಚಿತ್ರದ ಕಥಾಹಂದರ. ‘ಡೇರ್‌ಡೆವಿಲ್ ಮುಸ್ತಾಫಾ’ ಚಿತ್ರದ ಚಿತ್ರಕಥೆ, ಸಂಭಾಷಣೆ ಬರೆದಿದ್ದ ಅನಂತ ಶಾಂದ್ರೇಯ ಈ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.