ADVERTISEMENT

ಗಡಿಯಾರ ನಿರ್ದೇಶಕರಿಂದ ‘ಹೊಸದಿಗಂತ’ ಸಿನಿಮಾ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 13:15 IST
Last Updated 8 ಜುಲೈ 2021, 13:15 IST
ಹೊಸದಿಗಂತ ಸಿನಿಮಾ ಪೋಸ್ಟರ್‌
ಹೊಸದಿಗಂತ ಸಿನಿಮಾ ಪೋಸ್ಟರ್‌   

‘ಗಡಿಯಾರ’ ಚಿತ್ರದ ಮೂಲಕ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ನಿರ್ದೇಶಕ ಪ್ರಬಿಕ್ ಮೊಗವೀರ್ ಈಗ ‘ಹೊಸದಿಗಂತ’ ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಕೋವಿಡ್‌ ಪ್ರಕರಣಗಳು ತೀವ್ರವಾಗಿದ್ದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದರೂ ‘ಗಡಿಯಾರ’ ಚಿತ್ರ ವಿಭಿನ್ನ ಕಥಾಹಂದರದ ಮೂಲಕ ಗುರುತಿಸಿಕೊಂಡಿತ್ತು. ‘ಹೊಸದಿಗಂತ’ ಸಿನಿಮಾ ಮನುಷ್ಯನ ಮಿದುಳಿನ ಮೇಲೆ ಹೆಣೆಯಲಾದ ಸಿನಿಮಾ. ‘ಸಂಥಿಂಗ್ ಅನೇಬಲ್ ಟು ಎಕ್ಸ್‌ಪ್ಲೈನ್‌’ಎನ್ನುವ ಟ್ಯಾಗ್‌ಲೈನ್‌ ಹೊಂದಿರುವ ಚಿತ್ರದ ಪೋಸ್ಟರ್ ಅನ್ನು ಕೂಡ ಸಿನಿಮಾ ತಂಡ ಬಿಡುಗಡೆ ಮಾಡಿದೆ. ಕಥೆ,ಚಿತ್ರಕಥೆ,ನಿರ್ಮಾಣದ ಜವಾಬ್ದಾರಿಯನ್ನೂ ಪ್ರಬಿಕ್ ಮೊಗವೀರ್ ಹೊತ್ತಿದ್ದಾರೆ.

‘ಗಡಿಯಾರಕ್ಕಿಂತ ಈ ಸಿನಿಮಾ ವಿಭಿನ್ನವಾಗಿ ಇರಲಿದೆ. ಸಾಮಾಜಿಕ ಸಂದೇಶ ಇರುವ ಮನರಂಜನೆ ಚಿತ್ರ ಇದಾಗಲಿದೆ. ನಂಬಲು ಅಸಾಧ್ಯವಾದ ತನಿಖಾ ವರದಿಯನ್ನು ಮುಂದಿಡುವುದು ಕಥೆಯ ಮುಖ್ಯ ಉದ್ದೇಶ. ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಇದು ಕೂಡ ಬಹು ತಾರಾಗಣದ ಸಿನಿಮಾ. ನಟ, ನಟಿಯರ ಆಯ್ಕೆ ನಡೆಯುತ್ತಿದೆ’ ಎಂದು ನಿರ್ದೇಶಕ ಪ್ರಬಿಕ್ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.