ADVERTISEMENT

ಗರ್ಲ್‌ಫ್ರೆಂಡ್‌ ಸಬಾ ಆಜಾದ್ ನಟನೆಯನ್ನು ಹೊಗಳಿದ ಹೃತಿಕ್‌ ರೋಷನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 10:16 IST
Last Updated 22 ಏಪ್ರಿಲ್ 2022, 10:16 IST
   

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ರಾಕೆಟ್‌ ಬಾಯ್ಸ್‌’ ವೆಬ್‌ ಸೀರಿಸ್‌ನಲ್ಲಿನ ಸಬಾ ಆಜಾದ್‌ ನಟನೆಯನ್ನು ಹೃತಿಕ್‌ ರೋಷನ್‌ ಹಾಡಿಹೊಗಳಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಶುಕ್ರವಾರ ಬರೆದುಕೊಂಡಿರುವ ಅವರು, ‘ನಾನು ನೋಡಿದ ಅತ್ಯುತ್ತಮ ನಟಿಯರಲ್ಲಿ ಸಬಾ ಆಜಾದ್‌ ಸಹ ಒಬ್ಬರು. ನೀನು(ಸಬಾ) ನನಗೆ ಸ್ಫೂರ್ತಿ’ ಎಂದು ಹೃತಿಕ್‌ ತಿಳಿಸಿದ್ದಾರೆ.

ಚಿತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಹೃತಿಕ್‌, ‘ಇದನ್ನು(ರಾಕೆಟ್‌ ಬಾಯ್ಸ್‌) ಮತ್ತೊಮ್ಮೆ ನೋಡುತ್ತಿದ್ದೇನೆ. ಇದರಿಂದ ಕಲಿಯುವುದು ತುಂಬಾ ಇದೆ. ಇಡೀ ತಂಡವು ಎಂತಹ ಅದ್ಭುತ ಕೆಲಸ ಮಾಡಿದೆ. ಇದರ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

ಹೃತಿಕ್ –ಸಬಾ ಇತ್ತೀಚಿಗೆ ರೆಸ್ಟೋರೆಂಟ್‌ನಿಂದ ಒಟ್ಟಿಗೆ ಹೊರಬರುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಜತೆಗೆ, ಹೃತಿಕ್ ರೋಶನ್ ಫ್ಯಾಮಿಲಿ ಪಾರ್ಟಿಯಲ್ಲೂ ಸಬಾ ಕಾಣಿಸಿಕೊಂಡಿದ್ದರು.

ಹೃತಿಕ್​ ರೋಷನ್ ಅವರು ಸಬಾ ಆಜಾದ್ ಜತೆಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.