ADVERTISEMENT

ಸೈನ್ಸ್‌ ಫಿಕ್ಷನ್‌ ಥ್ರಿಲ್ಲರ್‌ ಶಾರುಕ್‌ ವಿಲನ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 19:31 IST
Last Updated 7 ಆಗಸ್ಟ್ 2019, 19:31 IST
   

‘2.0’ ಸಿನಿಮಾ ಖ್ಯಾತಿಯ ನಿರ್ದೇಶಕ ಶಂಕರ್‌ ಷಣ್ಮುಗಂ ಸದ್ಯ ಸಿನಿಮಾಗಳ ಚಿತ್ರಕತೆ ಹಾಗೂ ಪೂರ್ವತಯಾರಿಯಲ್ಲಿತೊಡಗಿಸಿಕೊಂಡಿದ್ದಾರೆ. ಅವರು ಸೈನ್ಸ್‌ ಫಿಕ್ಷನ್‌ ಥ್ರಿಲ್ಲರ್‌ ಸಿನಿಮಾದ ಚಿತ್ರಕತೆಯನ್ನು ಸಿದ್ಧಪಡಿಸಿದ್ದು, ಈ ಸಿನಿಮಾದದಲ್ಲಿ ನಟ ಶಾರುಕ್‌ ಖಾನ್‌ ವಿಲನ್‌ ಆಗಿ ನಟಿಸಲಿದ್ದಾರೆ.ಈ ಸಿನಿಮಾದಲ್ಲಿ ನಟಿಸುವಂತೆಶಂಕರ್‌ ಅವರು ಶಾರುಕ್‌ ಅವರನ್ನು ಭೇಟಿ ಮಾಡಿ ಈಗಾಗಲೇ ಮಾತುಕತೆ ನಡೆಸಿದ್ದಾರೆ.

ಈ ಮೊದಲು ಈ ಪಾತ್ರದಲ್ಲಿ ಹೃತಿಕ್‌ ರೋಷನ್‌ ಅವರು ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಹೃತಿಕ್‌ ಬಳಿ ಕತೆ ಬಗ್ಗೆ ಚರ್ಚೆ ಸಹ ನಡೆಸಿದ್ದರು.ಆದರೆ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಸತ್ತೆ ಪೆ ಸತ್ತಾ’ ಸಿನಿಮಾವನ್ನು ಈಗಾಗಲೇ ಹೃತಿಕ್‌ ಒಪ್ಪಿಕೊಂಡಿದ್ದಾರೆ. ಎರಡು ಸಿನಿಮಾಗಳ ಡೇಟ್ಸ್‌ ಹೊಂದಿಕೆಯಾಗದೇ ಇರುವುದರಿಂದ ಅವರ ಸ್ಥಾನಕ್ಕೆ ಶಾರುಕ್‌ ಆಯ್ಕೆಯಾಗಿದ್ದಾರೆ.

ಈ ಹಿಂದೆ ಯಾವ ಸಿನಿಮಾಗಳಲ್ಲೂ ಶಂಕರ್‌ ಹಾಗೂ ಶಾರುಕ್‌ ಒಟ್ಟಿಗೆ ಕೆಲಸ ಮಾಡಿಲ್ಲ. ಚಿತ್ರಕತೆ, ನಿರ್ದೇಶನ, ಕಲಾವಿದರ
ಆಯ್ಕೆಯಿಂದ ಈ ಚಿತ್ರವು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ADVERTISEMENT

ಈ ಚಿತ್ರದಲ್ಲಿ ಖ್ಯಾತ ನಟ ಜಾಕಿ ಚಾನ್‌, ತಮಿಳು ನಟ ವಿಜಯ್‌, ಚೀನಾ ಕಲಾವಿದೆ ಲಿಬಿಂಗ್‌ಬಿಂಗ್‌ ಪ್ರಮುಖ ಪಾತ್ರಗಳಲ್ಲಿಅಭಿನಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.