ADVERTISEMENT

'ಮೈನೇ ಪ್ಯಾರ್ ಕಿಯಾ' ಚಿತ್ರದಲ್ಲಿ ಅಮ್ಮನ ನೋಡಲಾಗದೆ ಎದ್ದು ಹೋಗಿದ್ದೆ: ಆವಂತಿಕಾ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 11:36 IST
Last Updated 10 ಫೆಬ್ರುವರಿ 2022, 11:36 IST
ಆವಂತಿಕಾ, ಭಾಗ್ಯಶ್ರೀ
ಆವಂತಿಕಾ, ಭಾಗ್ಯಶ್ರೀ   

ಬಾಲಿವುಡ್‌ನಲ್ಲಿ 'ಮೈನೇಪ್ಯಾರ್ ಕಿಯಾ' ಸಿನಿಮಾ ತೆರೆಕಂಡು 3 ದಶಕಗಳು ಕಳೆದರೂ ನಟಿ ಭಾಗ್ಯಶ್ರೀ ಅವರನ್ನು ಅಭಿಮಾನಿಗಳು ಮರೆತಿಲ್ಲ! ಆ ದಿನಗಳಲ್ಲಿ ಸಲ್ಮಾನ್‌ ಖಾನ್‌ ಮತ್ತು ಭಾಗ್ಯಶ್ರೀ ಮುದ್ದಾದ ಜೋಡಿ ಎಂದೇ ಖ್ಯಾತಿಯಾಗಿದ್ದರು.

'ಮೈನೇ ಪ್ಯಾರ್ ಕಿಯಾ' ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಕೆಮಿಸ್ಟ್ರಿಯನ್ನು ಹಾಲಿವುಡ್‌ ಕೂಡ ಗಮನಸೆಳೆದಿತ್ತು. ಈ ಸಿನಿಮಾದ ಬಳಿಕ ಮದುವೆಯಾದ ಭಾಗ್ಯಶ್ರೀ ನಂತರದ ದಿನಗಳಲ್ಲಿ ಸಿನಿಮಾಗಳಿಂದ ದೂರವಾದರು.

ಇದೀಗ ಭಾಗ್ಯಶ್ರೀ ಮಕ್ಕಳಾದ ಆವಂತಿಕಾ ಮತ್ತು ಅಭಿಮನ್ಯು ಸಿನಿಮಾರಂಗ ಪ್ರವೇಶ ಮಾಡಿದ್ದಾರೆ. ಮೊದಲ ಬಾರಿಗೆ ಆವಂತಿಕಾ ಅಮ್ಮನ ನಟನೆ ಬಗ್ಗೆ ಮಾತನಾಡಿದ್ದಾರೆ.

ADVERTISEMENT

ಜೂಮ್‌ ಟಿ.ವಿಗೆ ನೀಡಿರುವ ಸಂದರ್ನಶನದಲ್ಲಿ ಮಾತನಾಡಿರುವ ಅವರು, ’ನಾನು ಚಿಕ್ಕವಳಿದ್ದಾಗ ಮೊದಲ ಸಲ ಮೈನೇ ಪ್ಯಾರ್ ಕಿಯಾ ಸಿನಿಮಾ ನೋಡುವಾಗ ಬೇಜಾರಾಗಿ ಅರ್ಧಕ್ಕೆ ರೂಮಿನಿಂದ ಹೊರ ಹೋಗಿದ್ದೆ. ಕೆಲವು ದೃಶ್ಯಗಳಲ್ಲಿ ಅಮ್ಮ ಬೇಜಾರಾಗಿದ್ದರು. ಅವರನ್ನು ನೋಡಲಾಗದೆ ಹೊರ ಹೋಗಿದ್ದೆ’ ಎಂದು ಹೇಳಿದ್ದಾರೆ.

90ರ ದಶಕದಲ್ಲಿ ಅಮ್ಮನಿಗೆ ಖ್ಯಾತಿ ತಂದಕೊಟ್ಟ ಸಿನಿಮಾ ಇದು. ಈಗಲೂ ನಾವು ಎಲ್ಲಿ ಹೋದರೂ ಅಮ್ಮನಿಗೆ ವೀಕ್ಷಕರು ಪ್ರೀತಿ ಅಭಿಮಾನ ತೋರಿಸುತ್ತಾರೆ ಎಂದು ಆವಂತಿಕಾ ಹೇಳಿದ್ದಾರೆ.

ಈ ಸಿನಿಮಾ ಮಾಡುವಾಗ ಭಾಗ್ಯಶ್ರೀ ಅವರಿಗೆ ಮದುವೆ ಪಿಕ್ಸ್‌ ಆಗಿತ್ತು. ಆ ಕಾರಣದಿಂದಾಗಿ ಈ ಚಿತ್ರವನ್ನು 7 ಬಾರಿ ತಿರಿಸ್ಕರಿಸಿದ್ದರು. ಕುಟುಂಬದವರ ಒತ್ತಾಯದ ಮೇರೆಗೆ ಈ ಸಿನಿಮಾ ಒಪ್ಪಿಕೊಳ್ಳಲಾಗಿತ್ತು ಎಂದು ಭಾಗ್ಯಶ್ರೀ ಹೇಳಿದ್ದಾರೆ.

ಭಾಗ್ಯಶ್ರೀ ಅವರು ಕನ್ನಡ, ತೆಲುಗು, ತಮಿಳು, ಭೋಜ್‌ಪುರಿ, ಬಂಗಾಳಿ ಸಿನಿಮಾಗಳಲ್ಲೂ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.