ADVERTISEMENT

ಕ್ಷಮೆ ಕೇಳಿ ದೊಡ್ಡವರಾಗಿ: ದರ್ಶನ್‌ಗೆ ಇಂದ್ರಜಿತ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 19:37 IST
Last Updated 16 ಜುಲೈ 2021, 19:37 IST
ಇಂದ್ರಜಿತ್‌ ಲಂಕೇಶ್‌
ಇಂದ್ರಜಿತ್‌ ಲಂಕೇಶ್‌   

ಬೆಂಗಳೂರು: ‘ನಾನು ಸಮಾಜದ ಹಿತದೃಷ್ಟಿಯಿಂದ ಮಾತನಾಡುತ್ತಿದ್ದೇನೆ. ನನ್ನ ಮಾತುಗಳಿಗೆ ನಾನು ಬದ್ಧ. ಹೋಟೆಲ್‌ನ ಕಾರ್ಮಿಕರಿಗೆ ನ್ಯಾಯ ಕೊಡಿಸಲು ಮುಂದೆ ಬಂದು ಮಾತನಾಡಿದ್ದೇನೆಯೇ ಹೊರತು ಸೆಲಿಬ್ರಿಟಿ ಕೇಸ್‌ ಎಂದಲ್ಲ’ ಎಂದುನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನ್ಯಾಯ ಆಗಿರುವುದು ಸಮಾಜದ ಸಾಮಾನ್ಯರಿಗೆ. ವೈಯಕ್ತಿಕ ದ್ವೇಷದಿಂದ ಅಥವಾ ಯಾವುದೇ ವ್ಯಕ್ತಿಯ ತೇಜೋವಧೆ ಮಾಡಲು ನಾನು ಮಾತನಾಡುತ್ತಿಲ್ಲ. ಸಮಾಜದ ಹಿತದೃಷ್ಟಿಯಿಂದ ಕ್ಷಮೆ ಕೇಳಿ. ಕುಮಾರಸ್ವಾಮಿ ಅವರಿಗಾಗಲಿ ಅಥವಾ ಸಿದ್ದರಾಮಯ್ಯನವರಿಗಾಗಲಿ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೆಸರನ್ನು ಮಾಧ್ಯಮ ಪ್ರಸ್ತಾಪ ಮಾಡಬಾರದು. ನನಗೆ ಯಾರೂ ಕುಮ್ಮಕ್ಕು ನೀಡಿಲ್ಲ’ ಎಂದಿದ್ದಾರೆ.

‘ನಾಳೆ ಕೆಲಸ ಹೋಗುತ್ತದೆ, ಜೀವನಕ್ಕೆ ಏನು ಮಾಡುವುದು ಎನ್ನುವ ಯೋಚನೆಯಿಂದ ಹೋಟೆಲ್‌ ಕಾರ್ಮಿಕರು ಮಾತನಾಡುವುದಕ್ಕೆ ಆಗುವುದಿಲ್ಲ. ಇನ್ನೂ ಮುಂದುವರಿಸಿದರೆ ಮತ್ತಷ್ಟು ತೇಜೋವಧೆ ಆಗುತ್ತದೆ. ಕಾರ್ಮಿಕರ ಬಳಿ ಕ್ಷಮೆ ಕೇಳಿ ದೊಡ್ಡವರಾಗಿ. ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ. ನಾನು ಪೊಲೀಸರ ತನಿಖೆಗೆ ಸಹಕರಿಸುತ್ತೇನೆ. ನ್ಯಾಯ ಕೊಡಿಸುವ ಉದ್ದೇಶವಷ್ಟೇ ನನ್ನದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.