ADVERTISEMENT

ಇಶಾನ್‌ಗೆ ಚೇತನ್‌ ಆ್ಯಕ್ಷನ್‌ ಕಟ್‌

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 19:30 IST
Last Updated 21 ಜುಲೈ 2022, 19:30 IST
ಇಶಾನ್‌
ಇಶಾನ್‌   

‘ಜೇಮ್ಸ್‌’ ಚಿತ್ರದ ಬಳಿಕ ನಿರ್ದೇಶಕ ಚೇತನ್‌ ಕುಮಾರ್‌ ಅವರ ಹೊಸ ಚಿತ್ರಕ್ಕೆ ಯಾರು ಹೀರೊ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.

ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಪವನ್‌ ಒಡೆಯರ್‌ ನಿರ್ದೇಶನದ ‘ರೇಮೊ’ ಚಿತ್ರದ ನಾಯಕ ಇಶಾನ್‌, ಚೇತನ್ ಅವರ ಮುಂದಿನ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ತಮ್ಮ ಸ್ಟೈಲ್‌ ಮೂಲಕವೇ ಚಂದನವನದಲ್ಲಿ ಹೆಸರು ಮಾಡಿರುವ ಇಶಾನ್‌, ‘ರೇಮೊ’ ಬಿಡುಗಡೆಗೆ ಕಾಯುತ್ತಿದ್ದಾರೆ.

ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರು ನಾಯಕನಾಗಿ ನಟಿಸಿದ್ದ ಕೊನೆಯ ಕಮರ್ಷಿಯಲ್‌ ಸಿನಿಮಾ ‘ಜೇಮ್ಸ್‌’ ಬಾಕ್ಸ್‌ ಆಫೀಸ್‌ನಲ್ಲಿದೊಡ್ಡಸದ್ದುಮಾಡಿತ್ತು. ‘ಜೇಮ್ಸ್‌’ಬಿಡುಗಡೆಯನ್ನು ಹಬ್ಬದಂತೆ ಅಭಿಮಾನಿಗಳು ಆಚರಿಸಿದ್ದರು. ಚಿತ್ರವು ಚೇತನ್‌ ಅವರ ನಿರ್ದೇಶನದ ಪಯಣಕ್ಕೂ ದೊಡ್ಡ ತಿರುವು ನೀಡಿತ್ತು. ‘ರೇಮೊ’ ಚಿತ್ರದ ಬಿಡುಗಡೆ ನಂತರ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಶೀರ್ಷಿಕೆ ಹಾಗೂ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ ಎನ್ನುತ್ತಾರೆ ಚೇತನ್ ಕುಮಾರ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.