ADVERTISEMENT

ಕಬಿನಿ ಅಂಗಳದಲ್ಲಿ ವಿಹರಿಸಿದ ಪ್ರೇಮಲೋಕದ ಚೆಲುವೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 14:25 IST
Last Updated 21 ಫೆಬ್ರುವರಿ 2021, 14:25 IST
ಕಬಿನಿಯಲ್ಲಿ ಜೂಹಿ ಚಾವ್ಲಾ
ಕಬಿನಿಯಲ್ಲಿ ಜೂಹಿ ಚಾವ್ಲಾ   

ಪ್ರೇಮಲೋಕದ ಚೆಲುವೆ, ಬಾಲಿವುಡ್ ನಟಿ ಜೂಹಿ ಚಾವ್ಲಾ ಇತ್ತೀಚೆಗೆ ಕರ್ನಾಟಕದ ಕಬಿನಿಗೆ ಭೇಟಿ ನೀಡಿದ್ದರು. ತಮ್ಮ ಬಿಡುವಿನ ದಿನಗಳನ್ನು ಕಳೆಯಲು ಕುಟುಂಬ ಸಮೇತರಾಗಿ ಕಬಿನಿಗೆ ಬಂದಿದ್ದರು ಈ ಬೆಡಗಿ. ಕಬಿನಿ ಹಾಗೂ ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಕುಟುಂಬದವರೊಡನೆ ಸುತ್ತಾಡಿ ಎಂಜಾಯ್ ಮಾಡಿದ್ದರು. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಜೂಹಿ. ತಮ್ಮ ಸೆಲ್ಫಿ ಫೋಟೊ ಹಂಚಿಕೊಂಡು ‘ಕರ್ನಾಟಕದ ಕಬಿನಿ ನದಿಯ ಬಳಿ ಇದ್ದೇವೆ, ಈಗ ಸಫಾರಿಗೆ ಹೊರಡುತ್ತೇವೆ’ ಎಂದು ಬರೆದುಕೊಂಡಿದ್ದರು.

ಅಲ್ಲದೇ ಆಕೆ ತಾವು ಉಳಿದುಕೊಂಡಿದ್ದ ರೆಸಾರ್ಟ್‌ನಲ್ಲಿ ಮಗನೊಂದಿಗೆ ಸೇರಿ ಗಿಡ ನೆಟ್ಟಿದ್ದಾರೆ. ಅದರ ವಿಡಿಯೊವನ್ನು ಕೂಡ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷದ ಫೆಬ್ರುವರಿಯಲ್ಲಿ ರವೀನಾ ಟಂಡನ್ ಕೂಡ ನಾಗರಹೊಳೆಯಲ್ಲಿ ಸಫಾರಿ ಮಾಡಿದ್ದರು. ಕೆಜಿಎಫ್‌ ಚಾಪ್ಟರ್ 2 ಚಿತ್ರದ ಶೂಟಿಂಗ್‌ಗಾಗಿ ಮೈಸೂರಿಗೆ ಬಂದಿದ್ದಾಗ ಅವರು ಕಬಿನಿಗೆ ಭೇಟಿ ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT