ADVERTISEMENT

ವರಮಹಾಲಕ್ಷ್ಮಿ ಹಬ್ಬಕ್ಕೆ ‘ಕಾಲದಚಕ್ರ’ದ ತರಗೆಲೆ ಹಾಡು

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 16:39 IST
Last Updated 26 ಜುಲೈ 2020, 16:39 IST
ಕಾಲಚಕ್ರ ಸಿನಿಮಾದಲ್ಲಿ ವಸಿಷ್ಠ ಸಿಂಹ ಮತ್ತು ರಕ್ಷಾ
ಕಾಲಚಕ್ರ ಸಿನಿಮಾದಲ್ಲಿ ವಸಿಷ್ಠ ಸಿಂಹ ಮತ್ತು ರಕ್ಷಾ   

ಕಂಚಿನ ಕಂಠ ಮತ್ತು ಮಾಗಿದ ಅಭಿನಯದ ಮೂಲಕ ನಾಡಿನ ಸಿನಿ ಪ್ರೇಕ್ಷಕರ ಗಮನ ಸೆಳೆದವರು ನಟ ವಸಿಷ್ಠ ಸಿಂಹ. ಅವರು ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ‘ಕಾಲಚಕ್ರ’ ಸಿನಿಮಾದ “ತರಗೆಲೆ ಸಂಸಾರ” ಹಾಡನ್ನು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಇದೇ ಶುಕ್ರವಾರ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಶ್ರೀ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಇದೇ ಶುಕ್ರವಾರ ಕಾಲಚಕ್ರ ಸಿನಿಮಾದ “ತರಗೆಲೆ ಸಂಸಾರ” ವೀಡಿಯೊ ಸಾಂಗ್ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹರಸಿ ಎಂದು ಸಿಂಹ ಟ್ವೀಟ್‌ ಮಾಡಿ ಮನವಿ ಮಾಡಿದ್ದಾರೆ.

ಸಂಗೀತ ನಿರ್ದೇಶಕ ಗುರುಕಿರಣ್‌ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೊದಲ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ವಿಶೇಷವಾದ ಈ ಹಾಡನ್ನು ಆಲಿಸಲು ಸಿನಿರಸಿಕರು ಕಾತರರಾಗಿದ್ದಾರೆ. ಹಾಡಿನ ಮೇಕಿಂಗ್‌ ದೃಶ್ಯಗಳು ಈ ಹಿಂದೆ ಬಿಡುಗಡೆಯಾದಾಗಲೇ ಪ್ರೇಕ್ಷಕರ ಕುತೂಹಲ ಇಮ್ಮಡಿಯಾಗಿತ್ತು. ವಸಿಷ್ಠ ಅವರ ಕಾಸ್ಟೂಮ್‌ ಕೂಡ ಗಮನ ಸೆಳೆದಿತ್ತು.

ADVERTISEMENT

ಯುವ ನಿರ್ದೇಶಕ ಸುಮಂತ್ ಕ್ರಾಂತಿ ಕಾಲಚಕ್ರ ಚಿತ್ರದ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.ಕೊಡಗು ಮೂಲದ ರಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಎಲ್‌.ಎಂ. ಸೂರಿ ಅವರ ಛಾಯಾಗ್ರಹಣವಿದೆ. ಆವಿಕಾ ರಾಠೋಡ್‌, ರಾಜ್‌ ದಿಲೀಪ್‌ ಶೆಟ್ಟಿ, ಸುಚೇಂದ್ರಪ್ರಸಾದ್, ಹನುಮಂತೇಗೌಡ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.