ADVERTISEMENT

ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ಕಬ್ಜ’ ಏಳು ಭಾಷೆಗಳಲ್ಲಿ ಡಬ್ಬಿಂಗ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:31 IST
Last Updated 9 ಜೂನ್ 2022, 19:31 IST
ಕಬ್ಜ            ಉಪೇಂದ್ರ
ಕಬ್ಜ ಉಪೇಂದ್ರ   

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ‘ಕಬ್ಜ’ ಚಿತ್ರದ ಡಬ್ಬಿಂಗ್‌ ಆರಂಭವಾಗಿದೆ. ಏಕಕಾಲದಲ್ಲಿ ಏಳು ಭಾಷೆಗಳಲ್ಲಿ ಡಬ್ಬಿಂಗ್‌ ನಡೆಯುತ್ತಿದೆ.

ಚಿತ್ರದ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. 1940ರ ಕಾಲಘಟ್ಟದ ಕಥೆ ಈ ಚಿತ್ರದ್ದು. ಬಹುಭಾಷಾ ತಾರೆಗಳನ್ನು ಸೇರಿಸಿಕೊಂಡು ಚಿತ್ರ ನಿರ್ಮಾಣವಾಗಿದೆ. ಆರ್‌.ಚಂದ್ರು ಅವರು ಈ ಚಿತ್ರದ ನಿರ್ದೇಶಕರು.

ಈ ಚಿತ್ರದ ಮೋಷನ್‌ ಪೋಸ್ಟರ್‌, ಮೇಕಿಂಗ್‌ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿವೆ. ಟೀಸರ್‌ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ ಚಿತ್ರತಂಡ. ಕನ್ನಡ ಚಿತ್ರರಂಗಕ್ಕೆ ಹೊಸದೊಂದು ಭರವಸೆ ನೀಡಲಿದೆ ಈ ಚಿತ್ರ ಎಂಬ ವಿಶ್ವಾಸ ನಿರ್ಮಾಣ ತಂಡದ್ದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.