ADVERTISEMENT

ಕಾಜಲ್ ಸಿನಿ ಜೀವನಕ್ಕೆ 12 ವರ್ಷ!

​ಪ್ರಜಾವಾಣಿ ವಾರ್ತೆ
Published 21 ಮೇ 2019, 9:42 IST
Last Updated 21 ಮೇ 2019, 9:42 IST
ಕಾಜಲ್ ಅಗರ್‌ವಾಲ್
ಕಾಜಲ್ ಅಗರ್‌ವಾಲ್   

ಹಾಲ್ಗೆನ್ನೆಯ ಚೆಲುವೆ ಕಾಜಲ್ ಅಗರ್‌ವಾಲ್ ತೆಲುಗು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ 12 ವರ್ಷಗಳಾಯಿತು. 2007ರಲ್ಲಿ ‘ಲಕ್ಷ್ಮಿ ಕಲ್ಯಾಣಂ’ ಸಿನಿಮಾದ ಮೂಲಕ ತೆಲುಗು ಸಿನಿರಂಗಕ್ಕೆ ಪ್ರವೇಶಿಸಿದ ಕಾಜಲ್ ಮೂಲ ಮುಂಬೈಯಾದರೂ, ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ನೆಲೆ ಕಂಡಿದ್ದು ವಿಶೇಷ.

ಸೌಂದರ್ಯ ಮತ್ತು ಪ್ರತಿಭೆಯ ಸಂಗಮದಂತಿರುವ ಕಾಜಲ್ ‘ಸೀತಾ’ ಅನ್ನುವ ರೊಮ್ಯಾಂಟಿಕ್, ಥ್ರಿಲ್ಲರ್ ಸಿನಿಮಾದಲ್ಲಿ ಬ್ಯುಸಿನೆಸ್ ವುಮನ್ ಆಗಿ ನಟಿಸುತ್ತಿದ್ದಾರೆ. ಚಿತ್ರ ಮೇ 24ರಂದು ತೆರೆ ಕಾಣಲಿದೆ.

ತೆರೆಮೇಲಷ್ಟೇ ಅಲ್ಲ, ತೆರೆ ಹಿಂದೆಯೂ ಕಾಜಲ್ ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿಂದ ಪ್ರಸಿದ್ಧಿ. ಇನ್‌ಸ್ಟಾಗ್ರಾಂನಲ್ಲಿ 10 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಅವರು, ಬೋಲ್ಡ್ ಔಟ್‌ಫಿಟ್‌ಗಳನ್ನು ಧರಿಸಿ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಚೆಗಷ್ಟೆ ತಮ್ಮ ಹೊಸ ಫೋಟೊಶೂಟ್ ಚಿತ್ರಗಳನ್ನು ಕಾಜಲ್ ಹಂಚಿಕೊಂಡಿದ್ದು ನೋಡುಗರನ್ನು ಸೆಳೆಯುತ್ತಿವೆ.

ADVERTISEMENT

ಕಠಿಣ ಶ್ರಮದ ಮೂಲಕ ವೃತ್ತಿ ಬದುಕಿನಲ್ಲಿ ಸಾಧನೆ ಮಾಡಿರುವ ಈ ಮೂವತ್ಮೂರರ ಚೆಲುವೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಕೆಲಸ ಮಾಡಲು ಇಚ್ಛಿಸುವುದಿಲ್ಲವೆಂದು ಸಂದರ್ಶನವೊಂದರಲ್ಲಿ ದೃಢವಾಗಿಯೇ ಉತ್ತರಿಸಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.