ADVERTISEMENT

ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಅಭಿನಯದ ‘ಸರ್ವಸ್ಯ ನಾಟ್ಯಂ’ ತೆರೆಗೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 3:17 IST
Last Updated 2 ಸೆಪ್ಟೆಂಬರ್ 2022, 3:17 IST
‘ಸರ್ವಸ್ಯ ನಾಟ್ಯಂ’ ಮಕ್ಕಳೊಂದಿಗೆ ರಿಶಿಕುಮಾರ ಸ್ವಾಮೀಜಿ
‘ಸರ್ವಸ್ಯ ನಾಟ್ಯಂ’ ಮಕ್ಕಳೊಂದಿಗೆ ರಿಶಿಕುಮಾರ ಸ್ವಾಮೀಜಿ   

ಅನಾಥ ಮಕ್ಕಳು ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡುವ ಕಥಾಹಂದರದ ‘ಸರ್ವಸ್ಯ ನಾಟ್ಯಂ’ ಚಿತ್ರ ಸೆ. 2ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಡಿಎಂಕೆ ಆ್ಯಡ್‌ ಜೋನ್ ಅಡಿಯಲ್ಲಿ ಮನೋಜ್ ವರ್ಮ‌ ನಿರ್ಮಿಸಿರುವ ಈ ಚಿತ್ರಕ್ಕೆ ಮಂಜುನಾಥ್ ಬಿ.ಎನ್.(ವಿಜಯನಗರ ಮಂಜು) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನೂರಾರು ಮಕ್ಕಳ ಜೊತೆ ರಿಷಿ ಕುಮಾರ ಸ್ವಾಮೀಜಿ ಅವರೂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಎಂ.ಬಿ. ಹಳ್ಳಿಕಟ್ಟಿ ಅವರ ಛಾಯಾಗ್ರಹಣವಿದೆ.6 ಹಾಡುಗಳಿಗೆ ಎ.ಟಿ. ರವೀಶ್ ಸಂಗೀತ‌ ಸಂಯೋಜನೆ ಮಾಡಿದ್ದಾರೆ. ಸೌಂದರರಾಜನ್ ಅವರ ಸಂಕಲನ, ಹರ್ಷ ಚೆಲುವರಾಜ್ ಅವರ ಸಂಭಾಷಣೆ, ಎಂ.ಬಿ. ಲೋಕಿ ಅವರ ಸಾಹಿತ್ಯವಿದೆ.

ಸ್ವದೇಶಿ ಹಾಗೂ ಪಾಶ್ಚಾತ್ಯ ನೃತ್ಯಗಳ ನಡುವಿನ ಪೈಪೋಟಿಯ ಮೇಲೆ ಈ ಚಿತ್ರದ ಕಥೆ ನಡೆಯುತ್ತದೆ. ಅನಾಥ ಮಕ್ಕಳಿಗೆ ನೃತ್ಯ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ಕಾಳಿಮಠದ ರಿಶಿಕುಮಾರ ಸ್ವಾಮೀಜಿ ಅವರು ಕಾಣಿಸಿಕೊಂಡಿದ್ದಾರೆ. ನೂರೈವತ್ತಕ್ಕೂ ಅಧಿಕ ಮಕ್ಕಳು ಚಿತ್ರದಲ್ಲಿ ನಟಿಸಿದ್ದಾರೆ. ಶಮ್ಯ ಗುಬ್ಬಿ, ಬೇಬಿ ಸ್ಪೂರ್ತಿ, ಮಹೇಶರಾಜ್, ಮಾ.ಸುಶೀಲ್, ಹರ್ಷ, ಯುಕ್ತ, ವೆಂಕಟೇಶ್, ಮನೋಜ್ ವರ್ಮ, ಹೇಮ, ಅಂಜು, ಶ್ರದ್ಧಾ, ಹರ್ಷ ಚೆಲುವರಾಜ್ ನಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.