ADVERTISEMENT

‘ಕಂಡ್ಡಿಡಿ‌ ನೋಡಣ’ ಸಿನಿಮಾ ಮೇ 20ಕ್ಕೆ ತೆರೆಗೆ

ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಥಿಯೇಟರ್‌ಗಳಲ್ಲಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 13:50 IST
Last Updated 18 ಮೇ 2022, 13:50 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ‘ಕಂಡ್ಡಿಡಿ ನೋಡಣ’ ಸಿನಿಮಾದ ನಿರ್ದೇಶಕ ನಾಗೇಂದ್ರ ಅರಸ್ ಮಾತನಾಡಿದರು. ರಘು ವಡ್ಡಿ, ಪ್ರಣವ್ ಸೂರ್ಯ, ದಿವ್ಯಾ ಚಂದ್ರಧರ, ಶಶಿಕುಮಾರ್ ಹಾಗೂ ಯೋಗೇಶ ಗೌಡ ಇದ್ದಾರೆ
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ‘ಕಂಡ್ಡಿಡಿ ನೋಡಣ’ ಸಿನಿಮಾದ ನಿರ್ದೇಶಕ ನಾಗೇಂದ್ರ ಅರಸ್ ಮಾತನಾಡಿದರು. ರಘು ವಡ್ಡಿ, ಪ್ರಣವ್ ಸೂರ್ಯ, ದಿವ್ಯಾ ಚಂದ್ರಧರ, ಶಶಿಕುಮಾರ್ ಹಾಗೂ ಯೋಗೇಶ ಗೌಡ ಇದ್ದಾರೆ   

ಹುಬ್ಬಳ್ಳಿ: ‘ಚಾಲೆಂಜಿಂಗ್ ಥ್ರಿಲ್ಲರ್ ಕಥಾಹಂದರದ ‘ಕಂಡ್ಡಡಿ ನೋಡಣ’ ಸಿನಿಮಾವು ರಾಜ್ಯದಾದ್ಯಂತ ಮೇ 20ರಂದು ಬಿಡುಗಡೆಯಾಗಲಿದೆ. ಬಹುತೇಕ ಸಿನಿಮಾಗಳು ಬೆಂಗಳೂರು ಕೇಂದ್ರಿತವಾಗಿಯೇ ತೆರೆ ಕಾಣುತ್ತವೆ. ಆದರೆ, ನಮ್ಮ ಸಿನಿಮಾ ಉತ್ತರ ಕರ್ನಾಟಕದ ಹೆಚ್ಚು ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ’ ಎಂದು ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಹೇಳಿದರು.

‘ಕನ್ನಡ ಸಿನಿಮಾಗಳಿಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. ನಮ್ಮ ಸಿನಿಮಾದಲ್ಲಿ ಇಲ್ಲಿನ ಕಲಾವಿದರೂ ನಟಿಸುವುದರಿಂದಈ ಭಾಗದಲ್ಲೇ ಹೆಚ್ಚಾಗಿ ಪ್ರಮೋಷನ್ ಮಾಡಲಾಗುತ್ತಿದೆ.ಶ್ರೀಧರ್ ಕಶ್ಯಪ್ ಸಂಗೀತ ನಿರ್ದೇಶನವಿರುವ ಚಿತ್ರದಲ್ಲಿ ಐದು ಹಾಡುಗಳಿವೆ. ವಿನೋದ್ ಜೈರಾಜ್ ಸಿನಿಮಾಟೊಗ್ರಫಿ ಮತ್ತು ಎನ್.ಎಂ. ವಿಶ್ವ ಅವರ ಸಂಕಲನ ಚಿತ್ರಕ್ಕಿದೆ’ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಯಕ ನಟ ಪ್ರಣವ್ ಸೂರ್ಯ ಮಾತನಾಡಿ, ‘ಅನಿಮೇಟರ್ ಆಗಿರುವ ನಾನು, ಈಗಾಗಲೇ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಪೂರ್ಣಪ್ರಮಾಣದಲ್ಲಿ ಮೊದಲ ಸಲ ನಾಯಕ ನಟನಾಗಿ ನಟಿಸುತ್ತಿದ್ದೇನೆ. ಮಧ್ಯಮ ವರ್ಗದ ಯುವಕನ ಬದುಕಿನಲ್ಲಾಗುವ ಅನಿರೀಕ್ಷಿತ ತಿರುವುಗಳ ಕುರಿತ ಕಥೆ ಇದಾಗಿದೆ. ಹಾಗಾಗಿ, ಚಿತ್ರದ ಶೀರ್ಷಿಕೆಯನ್ನು ಕಂಡ್ಡಿಡಿ ನೋಡಣ ಎಂದು ಇಟ್ಟಿದ್ದೇವೆ. ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.

ADVERTISEMENT

ನಿರ್ಮಾಪಕರಾದ ದಿವ್ಯಾ ಚಂದ್ರಧರ,ಶಶಿಕುಮಾರ್, ಯೋಗೇಶ್ ಗೌಡ ಮಾತನಾಡಿ, ‘ದುಡ್ಡು ಮಾಡುವುದಕ್ಕಿಂತ ಹೆಚ್ಚಾಗಿ ಉತ್ತಮ ಸಿನಿಮಾವನ್ನು ಜನರಿಗೆ ಕೊಡಬೇಕು ಎಂಬ ಉದ್ದೇಶದಿಂದ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದೇವೆ. ಜರ್ಮನ್ ಮತ್ತು ಲಂಡನ್‌ನಲ್ಲಿ ಸಿನಿಮಾದ ಕಮ್ಯೂನಿಟಿ ಪ್ರದರ್ಶನ ಇರಲಿದೆ. ತಿಂಗಳ ಬಳಿಕ ತಮಿಳು ಮತ್ತು ತೆಲುಗಿನಲ್ಲಿಯೂ ಸಿನಿಮಾವನ್ನು ಬಿಡುಗಡೆ ಮಾಡುವ ಆಲೋಚನೆ ಇದೆ’ ಎಂದು ತಿಳಿಸಿದರು.

ರಘು ವಡ್ಡಿ,ಕಲ್ಲಪ್ಪ ಶಿರಕೋಳ, ಆಕಾಶ್, ಅನು, ಮಂಜುನಾಥ್ ಹಾಗೂ ದಿವ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.