ಹೊಸ ವರ್ಷದ ಮೊದಲ ದಿನದಂದುತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ಬಾಲಿವುಡ್ ನಟಿ ಕಂಗನಾ ಭೇಟಿ ನೀಡಿದ್ದಾರೆ.
ಈ ಕುರಿತ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿರುವ ಅವರು ಪ್ರೀತಿಯ ಶತ್ರುಗಳ ಕರುಣೆಗಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.
‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.ತಿರುಪತಿ ಬಾಲಾಜಿಯಆಶೀರ್ವಾದದೊಂದಿಗೆ ಈ ವರ್ಷವನ್ನು ಪ್ರಾರಂಭಿಸುತ್ತಿದ್ದೇನೆ. ಇದುಸ್ಮರಣೀಯ ಎಂಬುದಾಗಿನಾನುಭಾವಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಹು ಕೇತು ದೇವಸ್ಥಾನಕ್ಕೆ ಭೇಟಿ ನೀಡಿದಫೋಟೊವನ್ನು ಹಂಚಿಕೊಂಡಿರುವ ಅವರು,‘ಜಗತ್ತಿನಲ್ಲಿ ಒಂದೇ ರಾಹು ಕೇತು ದೇವಾಲಯವಿದೆ.ಇದು ತಿರುಪತಿ ಬಾಲಾಜಿ ದೇವಸ್ಥಾನಕ್ಕೆತುಂಬಾ ಹತ್ತಿರದಲ್ಲಿದೆ. ಇಲ್ಲಿ ಪೂಜೆಯನ್ನುಸಲ್ಲಿಸಲಾಯಿತು.ನನ್ನ ಪ್ರೀತಿಯ ಶತ್ರುಗಳ ಕರುಣೆಯನ್ನು ಹೊಂದಲು ನಾನು ಅಲ್ಲಿಗೆ ಹೋಗಿದ್ದೆ.ಈ ವರ್ಷದಲ್ಲಿ ನನ್ನ ಮೇಲೆಕಡಿಮೆ ಪೊಲೀಸ್ ದೂರುಗಳು ಹಾಗೂಎಫ್‌ಐಆರ್‌ಗಳು ದಾಖಲಾಗಲಿ. ಹೆಚ್ಚಿನ ಪ್ರೇಮ ಪತ್ರಗಳು ಬರಲಿ.ಜೈ ರಾಹು ಕೇತು’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.