ADVERTISEMENT

ಚೀನಾ ವಿರುದ್ಧದ ಹೋರಾಟಕ್ಕೆ ದರ್ಶನ್ ಅಭಿಮಾನಿಗಳ ಬೆಂಬಲ: 'ಡಿ' ಟೀಮ್ ಖಾತೆ ಡಿಲೀಟ್‌

ಚೀನಾದ ಆಪ್‌ಗಳು ಮತ್ತು ವಸ್ತುಗಳನ್ನು ಬಳಸದಂತೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 8:27 IST
Last Updated 21 ಜೂನ್ 2020, 8:27 IST
ದರ್ಶನ್‌
ದರ್ಶನ್‌   

ಭಾರತೀಯ ಸೈನಿಕರ ಮೇಲೆ ಚೀನಾ ನಡೆಸಿರುವ ದಾಳಿ ಖಂಡಿಸಿ, ದೇಶದಾದ್ಯಂತ ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನ ಆರಂಭವಾಗಿದೆ. ಅದರಲ್ಲೂ ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಚೀನಾ ಆ್ಯಪ್‌ ‘ಟಿಕ್‌ಟಾಕ್‘ ಅನ್ನು ಅನೇಕರು ಸ್ವಯಂಪ್ರೇರಿತರಾಗಿ ಅನ್‌ಇನ್‌ಸ್ಟಾಲ್ ಮಾಡಿದ್ದಾರೆ.

ಈ ಅಭಿಯಾನದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಅಭಿಮಾನಿಗಳೂ ಭಾಗಿಯಾಗುತ್ತಿದ್ದಾರೆ. ಅದರಲ್ಲಿ ದರ್ಶನ್ ಫ್ಯಾನ್ಸ್ ಮೊದಲ ಹೆಜ್ಜೆ ಇಟ್ಟಿದ್ದಾರೆ.ಟಿಕ್‌ಟಾಕ್ ಅಪ್ಲಿಕೇಷನ್‌ನಲ್ಲಿದ್ದ ನಮ್ಮ ತೂಗುದೀಪ 'ಡಿ' ಟೀಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ’ಚೀನಾದ ಅಪ್ಲಿಕೇಷನ್‌ಗಳನ್ನು ಮೊಬೈಲ್‌ನಿಂದ ಕಿತ್ತು ಬಿಸಾಕೋಣ. ಟಿಕ್ ಟಾಕ್ ಸೇರಿದಂತೆ ಎಲ್ಲ ಚೀನಾ ಅಪ್ಲಿಕೇಷನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿದ್ದೇವೆ. ಇದು ಚೀನಾದ ವಿರುದ್ಧನಮ್ಮ ಹೋರಾಟ. ನೀವೂ ಚೀನಾ ವಸ್ತುಗಳನ್ನು ಬಹಿಷ್ಕರಿಸಿ‘ ಎಂದು ಈ ಟೀಮ್‌ ಹೇಳಿದೆ.

'ಡಿ' ಖಾತೆ ಸುಮಾರು 23 ಸಾವಿರಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿತ್ತು. ಈ ಖಾತೆಯಿಂದ ಸಾಕಷ್ಟು ವಿಡಿಯೊಗಳು ಶೇರ್ ಆಗಿದ್ದವು.ಅಲ್ಲದೆ ಲಕ್ಷಗಟ್ಟಲೆ ಲೈಕ್ಸ್ ಗಳನ್ನು ಗಿಟ್ಟಿಸಿಕೊಳ್ಳುತ್ತಿತ್ತು. ಇಷ್ಟು ಜನಪ್ರಿಯವಾಗಿದ್ದ 'ಡಿ' ಖಾತೆಯನ್ನು ಡಿಲೀಟ್ ಮಾಡುವ ಮೂಲಕ ದರ್ಶನ್ ಅಭಿಮಾನಿಗಳು, ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಈ ಹಿಂದೆ ಟಿಕ್ ಟಾಕ್ ನಲ್ಲಿಯೂ ದರ್ಶನ್ ಹೆಸರು ದಾಖಲೆ ನಿರ್ಮಿಸಿತ್ತು. ಇತ್ತೀಚಿಗೆ ಟಿಕ್‌ಟಾಕ್‌‌ನಲ್ಲಿ ಅತಿ ಹೆಚ್ಚು ಬಳಕೆಯಾದ ‘ಹ್ಯಾಶ್ ಟ್ಯಾಗ್‘ ಅಂದರೆ ದರ್ಶನ್ ಅವರದ್ದು ಎನ್ನುವ ಸುದ್ದಿ ವೈರಲ್ ಆಗಿತ್ತು. ಅಭಿಮಾನಿಗಳು, ದರ್ಶನ್ ಸಿನಿಮಾದ ಡೈಲಾಗ್, ಹಾಡುಗಳನ್ನು ಹೆಚ್ಚಾಗಿ ಬಳಸಿಕೊಂಡು ಅದಕ್ಕೆ ವಿಡಿಯೊ ಸೇರಿಸಿ ಅಪ್ ಲೋಡ್ ಮಾಡಿದ್ದರು. ‘ಡಿ ಬಾಸ್‘ ಹ್ಯಾಶ್ ಟ್ಯಾಗ್ 3 ಬಿಲಿಯನ್‌ಗೂ ಹೆಚ್ಚು ಬಾರಿ ಬಳಕೆಯಾಗಿತ್ತು.

ದರ್ಶನ್ ಅಭಿಮಾನಿಗಳ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದರ್ಶನ್ ಫ್ಯಾನ್ಸ್ ಈ ಕೆಲಸ ಮಾಡುತ್ತಿದ್ದಂತೆ, ಸಾಕಷ್ಟು ಮಂದಿ ತಮ್ಮಟಿಕ್ ಟಾಕ್ ಖಾತೆ ಡಿಲೀಟ್ ಮಾಡಿ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.