ADVERTISEMENT

‘ಉಸಿರಿ’ನ ಹಿಂದೆ ತಿಲಕ್‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:11 IST
Last Updated 3 ಜುಲೈ 2025, 23:11 IST
ತಿಲಕ್, ಪ್ರಿಯಾ ಹೆಗ್ಡೆ
ತಿಲಕ್, ಪ್ರಿಯಾ ಹೆಗ್ಡೆ   

ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಉಸಿರು’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಚಿತ್ರಕ್ಕೆ ಪ್ರಭಾಕರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌ ಕಟ್ ಹೇಳಿದ್ದಾರೆ. 

‘ನಿರ್ದೇಶನ ನನ್ನ ಹನ್ನೆರಡು ವರ್ಷಗಳ ಕನಸು. ಒಂದೆರಡು ತಮಿಳು ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದು, ಇದು ನನ್ನ ನಿರ್ದೇಶನದ ಪ್ರಥಮ ಚಿತ್ರ. ಸಸ್ಪೆನ್ಸ್‌, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದೆ. ಪೊಲೀಸ್‌ ಅಧಿಕಾರಿಯೊಬ್ಬ ತನ್ನ ಹೆಂಡತಿಯನ್ನು ಆತಂಕಕಾರಿ ವ್ಯಕ್ತಿಯಿಂದ ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದೇ ಚಿತ್ರಕಥೆ. ಯಾವ ಪಾತ್ರವೂ ಸುಮ್ಮನೆ ಬಂದು ಹೋಗುವುದಿಲ್ಲ. ಗಂಡನ ಪ್ರೀತಿ, ಸ್ನೇಹ, ಸಂಬಂಧ ಹೀಗೆ ಎಲ್ಲಾ ರೀತಿಯ ಕಂಟೆಂಟ್ ಚಿತ್ರದಲ್ಲಿದ್ದು, 07.08.09 ಎಂಬ ಟ್ಯಾಗ್‌ಲೈನ್‌ ಚಿತ್ರಕ್ಕಿದೆ. ತಿಲಕ್ ಪೊಲೀಸ್ ಅಧಿಕಾರಿಯಾಗಿದ್ದು, ಅವರ ಪತ್ನಿಯ ಪಾತ್ರದಲ್ಲಿ ಪ್ರಿಯಾ ಹೆಗ್ಡೆ ನಟಿಸಿದ್ದಾರೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ‌’ ಎಂದರು ನಿರ್ದೇಶಕರು.

ಆರ್‌.ಎಸ್‌.ಪಿ.ಪ್ರೊಡಕ್ಷನ್ಸ್‌ ಮೂಲಕ ಲಕ್ಷ್ಮಿ ಹರೀಶ್ ಬಂಡವಾಳ ಹೂಡಿದ್ದಾರೆ. ಆರ್‌.ಎಸ್.ಗಣೇಶ್ ನಾರಾಯಣನ್ ಸಂಗೀತವಿದೆ. ಸಂತೋಷ್, ಅಪೂರ್ವ, ಅರುಣ್ ಮುಂತಾದವರು ಚಿತ್ರದಲ್ಲಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.