ಬೆಂಗಳೂರು: ಜೋಗಿ ಪ್ರೇಮ ನಿರ್ದೇಶನದಲ್ಲಿ ಇತ್ತೀಚೆಗಷ್ಟೇ ತೆರೆ ಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಏಕ್ ಲವ್ ಯಾ ಸಿನಿಮಾ ಅನೇಕ ಕಾರಣಗಳಿಂದ ಗಮನ ಸೆಳೆದಿದೆ.ಅದರಲ್ಲೂ ಈ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನವನಟಿ ರೀಷ್ಮಾ ನಾಣಯ್ಯ ಅವರು ಸಾಕಷ್ಟು ಸದ್ದು ಮಾಡಿದ್ದಾರೆ.ಏಕ್ ಲವ್ ಯಾ ಮೂಲಕ ಸಿನಿಮಾ ರಂಗ ಪ್ರವೇಶಿಸಿರುವ ರೀಷ್ಮಾ ನಾಣಯ್ಯ ಅವರು ಮಡಿಕೇರಿ ಮೂಲದವರು. ಸದ್ಯ ಬೆಂಗಳೂರಿನಲ್ಲಿ ಪದವಿ ಮುಗಿಸಿರುವ ಈ ಮುದ್ದು ಮುಖದ ಚೆಲುವೆ, ಸಿನಿ ರಂಗದಲ್ಲಿ ಮತ್ತಷ್ಟು ಹೊಸ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ.ತಮ್ಮ 20 ನೇ ವಯಸ್ಸಿನಲ್ಲೇ ಸ್ಟಾರ್ ನಿರ್ದೇಶಕರ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಸ್ಯಾಂಡಲ್‌ವುಡ್‌ಗೆ ಸಿಕ್ಕಿರುವ ಹೊಸ ಪ್ರತಿಭೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 10:19 IST
Last Updated 27 ಮಾರ್ಚ್ 2022, 10:19 IST
ಜೋಗಿ ಪ್ರೇಮ ನಿರ್ದೇಶನದಲ್ಲಿ ಇತ್ತೀಚೆಗಷ್ಟೇ ತೆರೆ ಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಏಕ್ ಲವ್ ಯಾ ಸಿನಿಮಾ ಅನೇಕ ಕಾರಣಗಳಿಂದ ಗಮನ ಸೆಳೆದಿದೆ. ಅದರಲ್ಲೂ ಈ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನವನಟಿ ರೀಷ್ಮಾ ನಾಣಯ್ಯ ಅವರು ಸಾಕಷ್ಟು ಸದ್ದು ಮಾಡಿದ್ದಾರೆ.
ಏಕ್ ಲವ್ ಯಾ ಮೂಲಕ ಸಿನಿಮಾ ರಂಗ ಪ್ರವೇಶಿಸಿರುವ ರೀಷ್ಮಾ ನಾಣಯ್ಯ ಅವರು ಮಡಿಕೇರಿ ಮೂಲದವರು.
ಸದ್ಯ ಬೆಂಗಳೂರಿನಲ್ಲಿ ಪದವಿ ಮುಗಿಸಿರುವ ಈ ಮುದ್ದು ಮುಖದ ಚೆಲುವೆ, ಮತ್ತಷ್ಟು ಹೊಸ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ.
ರೀಷ್ಮಾ ತಮ್ಮ 20 ನೇ ವಯಸ್ಸಿನಲ್ಲೇ ಸ್ಟಾರ್ ನಿರ್ದೇಶಕರ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಸ್ಯಾಂಡಲ್‌ವುಡ್‌ಗೆ ಸಿಕ್ಕಿರುವ ಹೊಸ ಪ್ರತಿಭೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.