ADVERTISEMENT

ನಿಮ್ಮ ಫಿಟ್‌ನೆಸ್ ನೋಡಿದ್ರೆ ನಂಗೆ ನನ್ನ ‘ಕಲಾಸಿಪಾಳ್ಯ’ ನೆನಪಾಗುತ್ತೆ.. ಸಾಧು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 7:15 IST
Last Updated 23 ಅಕ್ಟೋಬರ್ 2025, 7:15 IST
<div class="paragraphs"><p>ಇತ್ತೀಚೆಗೆ ಸಾಧು ಕೋಕಿಲಾ ಅವರು ಚೆನ್ನೈಗೆ ಭೇಟಿ ನೀಡಿದ್ದರು. ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ಜಿಮ್ ಮಾಡಲು ಬಂದಿದ್ದ ತಮಿಳಿನ ಖ್ಯಾತ ನಟ ಆರ್ಯ ಅವರನ್ನು ಸಾಧು ಭೇಟಿಯಾಗಿದ್ದರು.</p></div>

ಇತ್ತೀಚೆಗೆ ಸಾಧು ಕೋಕಿಲಾ ಅವರು ಚೆನ್ನೈಗೆ ಭೇಟಿ ನೀಡಿದ್ದರು. ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ಜಿಮ್ ಮಾಡಲು ಬಂದಿದ್ದ ತಮಿಳಿನ ಖ್ಯಾತ ನಟ ಆರ್ಯ ಅವರನ್ನು ಸಾಧು ಭೇಟಿಯಾಗಿದ್ದರು.

   

ಬೆಂಗಳೂರು: ಕನ್ನಡ ಚಿತ್ರಲೋಕದ ಖ್ಯಾತ ಹಾಸ್ಯ ನಟ ಸಾಧು ಕೋಕಿಲಾ ಬರೀ ಸಿನಿಮಾದಲ್ಲಷ್ಟೇ ಅಲ್ಲ, ನಿಜಜೀವನದಲ್ಲೂ ತಮ್ಮ ಸಂಗಡ ಇದ್ದವರಿಗೆ ಹಾಸ್ಯ ರಸಾಯನ ನೀಡುವುದನ್ನು ಕಾಣುತ್ತೇವೆ.

ಇತ್ತೀಚೆಗೆ ಸಾಧು ಕೋಕಿಲಾ ಅವರು ಚೆನ್ನೈಗೆ ಭೇಟಿ ನೀಡಿದ್ದರು. ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ಜಿಮ್ ಮಾಡಲು ಬಂದಿದ್ದ ತಮಿಳಿನ ಖ್ಯಾತ ನಟ ಆರ್ಯ ಅವರನ್ನು ಸಾಧು ಭೇಟಿಯಾಗಿದ್ದರು.

ADVERTISEMENT

ಈ ಭೇಟಿಯ ಕ್ಷಣವನ್ನು ಅವರು ತಮ್ಮ ಫೇಸ್‌ಬುಕ್, ಎಕ್ಸ್‌ನಲ್ಲಿ ಹಾಕಿಕೊಂಡು ‘ಫನ್’ ಮಾಡಿದ್ದಾರೆ.

‘ಚೆನ್ನೈನಲ್ಲಿ ವರ್ಕೌಟ್ ಮಧ್ಯೆ ತಮಿಳು ನಟ ಆರ್ಯ ಅವರನ್ನು ಭೇಟಿಯಾದ ಕ್ಷಣ, ಅವರ Fitness ನೋಡಿ ನಂಗೆ ನನ್ನ ಕಲಾಸಿಪಾಳ್ಯ ದಿನಗಳೆಲ್ಲಾ ನೆನಪಾಯ್ತು! ಅವರ ಫಿಟ್ನೆಸ್ ಮತ್ತು ಡೆಡಿಕೇಶನ್ ನೋಡಿದ್ರೆ ಖುಷಿ ಆಗತ್ತೆ’ ಎಂದು ಬರೆದುಕೊಂಡಿದ್ದಾರೆ.

ನಂಗೆ ನನ್ನ ಕಲಾಸಿಪಾಳ್ಯ ದಿನಗಳೆಲ್ಲಾ ನೆನಪಾಯ್ತು ಎಂದು ಹೇಳಿರುವ ಅವರ ಮಾತುಗಳು ಅನೇಕ ನೆಟ್ಟಿಗರಿಗೆ ನಗೆ ಬುಗ್ಗೆಯನ್ನು ತರಿಸಿವೆ.

ದರ್ಶನ್ ಅಭಿನಯದ ಕಲಾಸಿಪಾಳ್ಯ ಸಿನಿಮಾದಲ್ಲಿ ಸಾಧು ಕೋಕಿಲಾ–ಬುಲೆಟ್ ಪ್ರಕಾಶ್ ಅವರ ಹಾಸ್ಯದ ಪ್ರಸಂಗಗಳು ಇಂದಿಗೂ ನೋಡುಗರಿಗೆ ನಗೆ ಉಕ್ಕಿಸುತ್ತವೆ. ಅದರಲ್ಲಿ ಸಾಧು ಕೋಕಿಲಾ ನಾಯಕಿಯನ್ನು ಮೆಚ್ಚಿಸಲು ಜಿಮ್ ಮಾಡುವ ಪ್ರಸಂಗಗಳನ್ನು ನೆನಪಿಸಿಕೊಂಡು ಸಾಧು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.