ADVERTISEMENT

ಇಂದು ಮೂರು ಚಿತ್ರಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 0:07 IST
Last Updated 25 ಏಪ್ರಿಲ್ 2025, 0:07 IST
ವಂಶಿ
ವಂಶಿ   

ಯಾವುದೇ ದೊಡ್ಡ ಸ್ಟಾರ್‌ಗಳ, ಪರಭಾಷಾ ಸ್ಟಾರ್‌ಗಳ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಇಲ್ಲ. ಆದಾಗ್ಯೂ ಕನ್ನಡ ಚಿತ್ರೋದ್ಯಮದಲ್ಲಿ ಚಿತ್ರ ಬಿಡುಗಡೆಗೆ ಪೈಪೋಟಿ ಕಾಣುತ್ತಿಲ್ಲ. ‘ಅಮರ ಪ್ರೇಮಿ ಅರುಣ’ ಸೇರಿದಂತೆ ಮೂರು ಚಿತ್ರಗಳು ಈ ವಾರ ತೆರೆ ಕಾಣುತ್ತಿವೆ. 

ಫೈರ್‌ಫ್ಲೈ

ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಚಿತ್ರವಿದು. ಶಿವರಾಜ್‌ಕುಮಾರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು, ಧ್ರುವ ಸರ್ಜಾ ಚಿತ್ರದ ಹಾಡನ್ನು ಬಿಡುಗಡೆ ಮಾಡಿರುವುದು ಸೇರಿದಂತೆ ನಾನಾ ಕಾರಣಗಳಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. 

ADVERTISEMENT

ವಂಶಿ ಚಿತ್ರದ ನಾಯಕ ಹಾಗೂ ನಿರ್ದೇಶಕ. ಇದು ಇವರ ಚೊಚ್ಚಲ ಚಿತ್ರ. ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ‌ ಸೇರಿ ಹಲವರು ತಾರಾಗಣದಲ್ಲಿದ್ದಾರೆ. 

‘ಒಂಟಿತನ ಹಾಗೂ ಖಿನ್ನತೆ ಎನ್ನುವುದು ಯುವಜನತೆಯಲ್ಲಿ ಹೆಚ್ಚಿದೆ. ಒಂದು ವಿಷಯದಿಂದ ಹೊರಬರಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಅವರು ಬಹಳ ಸೂಕ್ಷ್ಮ. ಇದನ್ನು ಹಲವರಲ್ಲಿ ನೋಡಿದ್ದೆ. ಈ ವಿಷಯವನ್ನೇ ಇಟ್ಟುಕೊಂಡು ಮನರಂಜನಾತ್ಮಕವಾಗಿ ಕಥೆ ಬರೆದೆ. ನಮ್ಮೊಳಗೇ ಬೆಳಕಿದೆ. ಅದನ್ನು ಅರಿತುಕೊಳ್ಳುವುದು ಮುಖ್ಯ ಎನ್ನುವುದಕ್ಕೆ ‘ಫೈರ್‌ಫ್ಲೈ’(ಮಿಂಚು ಹುಳ) ಎಂಬ ಶೀರ್ಷಿಕೆ ಇಟ್ಟೆ’ ಎಂದಿದ್ದಾರೆ ನಿರ್ದೇಶಕರು. 

ಮಗಳ ನಿರ್ಮಾಣದ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದಾರೆ. ಅವರ ಲುಕ್‌ ಗಮನ ಸೆಳೆದಿದೆ. ಚರಣ್‌ ರಾಜ್‌ ಸಂಗೀತ, ಅಭಿಲಾಷ್ ಕಳತ್ತಿ ಛಾಯಾಚಿತ್ರಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರ್ಮುಗಮ್ ಸಂಕಲನ ಚಿತ್ರಕ್ಕಿದೆ. 

ಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್

ಗಿರೀಶ್ ಕುಮಾರ್ ನಿರ್ದೇಶಿಸಿ, ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರವಿದು. ಇವರು ಈ ಹಿಂದೆ ‘ಭಾವಚಿತ್ರ’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ‘ಉಗ್ರಂ’ ಖ್ಯಾತಿಯ ತಿಲಕ್ ಅಭಿನಯಿಸಿದ್ದಾರೆ.

‘ಇದೊಂದು ಯೂಟ್ಯೂಬರ್ ಕಥೆಯಾಗಿದ್ದು, ಫ್ರಾಂಕ್ ವಿಡಿಯೊ ಮಾಡಿಕೊಂಡು ಇರುವವನ ಸಿನಿಮಾ. ಜೊತೆಗೆ ಇದೊಂದು ಆ್ಯಕ್ಷನ್, ಕಾಮಿಡಿ ಚಿತ್ರ ಕೂಡ. ಇದರಲ್ಲಿ ನಾನು ಫ್ರಾಂಕ್‌ಸ್ಟಾರ್ ಆಗಿದ್ದರೆ, ತಿಲಕ್ ಅವರು ಗ್ಯಾಂಗ್‌ಸ್ಟಾರ್‌ ಆಗಿರುತ್ತಾರೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬುವವರಿಗೆ ಚಿತ್ರ ಸ್ಫೂರ್ತಿಯಾಗಲಿದೆ.‌ ಎಲ್ಲರ ಜೀವನಕ್ಕೂ ಕನೆಕ್ಟ್‌ ಆಗುವ ಕಥೆ’ ಎನ್ನುತ್ತಾರೆ ಗಿರೀಶ್‌.

ವಿರಾನಿಕ ಶೆಟ್ಟಿ ಚಿತ್ರದ ನಾಯಕಿ. ಬಲ ರಾಜವಾಡಿ, ಹೊನ್ನವಳ್ಳಿ ಕೃಷ್ಣ, ಯುವ ಕಿಶೋರ್, ಲೋಕೇಂದ್ರ, ಸೂರಜ್‌ ಮುಂತಾದವರು ಚಿತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಜಾನ್ ಕೆನಡಿ ಸಂಗೀತ ಸಂಯೋಜಿಸಿದ್ದು, ಅಜಯ್ ಕುಮಾರ್ ಛಾಯಾಚಿತ್ರಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.