
ಪ್ರಜಾವಾಣಿ ವಾರ್ತೆ
ಬಹುತೇಕ ಹೊಸಬರೇ ಸೇರಿ ಸಿದ್ಧಪಡಿಸಿರುವ ‘ತಂತ್ರ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ವಿಶ್ವನಾಥ್ ಕಥೆ ಬರೆದು, ಆ್ಯಕ್ಷನ್– ಕಟ್ ಹೇಳಿದ್ದಾರೆ. ಶಶಿಕಾಂತ ನಾಟೀಕರ್ ಮುಖ್ಯ ಪಾತ್ರದಲ್ಲಿ ನಟಿಸುವ ಜತೆಗೆ ಸಿಲ್ವರ್ ಸ್ಕೈ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
‘ಮನೋವೈಜ್ಞಾನಿಕ, ಥ್ರಿಲ್ಲರ್ ಅಂಶಗಳಿಂದ ಕೂಡಿರುವ ಚಿತ್ರ. ಸಂಶೋಧನಾ ತಂಡವೊಂದು ಭೂತ, ಪ್ರೇತಗಳ ಕುರಿತು ಅಧ್ಯಯನ ಪ್ರಾರಂಭ ಮಾಡುತ್ತದೆ. ಆದರೆ ಅವರಿಗೆ ಎದುರಾಗುವ ಸಮಸ್ಯೆಗಳು ಅವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಅವುಗಳಿಂದ ಹೇಗೆ ಪಾರಾಗಿ ಬರುತ್ತಾರೆ ಎಂಬುದೇ ಚಿತ್ರಕಥೆ’ ಎಂದರು ನಿರ್ದೇಶಕ.
ವಿಕ್ರಾಂತ್, ಸೌಜನ್ಯ, ಪಾರು ದಾವಣಗೆರೆ, ಸಂತೋಷ್ ಕೆರಿ ಮುಂತಾದವರು ಅಭಿನಯಿಸಿದ್ದಾರೆ. ರಮೇಶ್ ಕೃಷ್ಣ ಸಂಗೀತ, ರೋಹನ್ ದೇಸಾಯಿ-ವರ್ಧನ್ ಬಾಗಲಕೋಟೆ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.