ADVERTISEMENT

Sandalwood: ‘ಮಾಜರ್‌’ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 0:30 IST
Last Updated 1 ಜನವರಿ 2026, 0:30 IST
ಲೋಕಿ, ಸಂಭ್ರಮಶ್ರೀ 
ಲೋಕಿ, ಸಂಭ್ರಮಶ್ರೀ    

ಸಂಗೀತ ಸಿನಿ ಹೌಸ್ ಲಾಂಛನದಲ್ಲಿ ಮುರುಗನಂದನ್ ಎಂ. ನಿರ್ಮಿಸಿರುವ, ಲೋಕಲ್ ಲೋಕಿ ನಿರ್ದೇಶನದ ‘ಮಾಜರ್‌’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. 

‘ನಿರ್ಭಯ ಹತ್ಯೆ ಮುಂತಾದ ಘಟನೆಗಳೇ ಈ ಕಥೆ ಬರೆಯಲು ಮುಖ್ಯ ಕಾರಣ. ಇಂತಹ ಕೃತ್ಯಗಳನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು ಎಂಬುವುದೇ ಈ ಸಿನಿಮಾದ ಮುಖ್ಯ ಉದ್ದೇಶ. ನಾನು ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದೇನೆ. ಎ.ಟಿ.ರವೀಶ್ ಸಂಗೀತ ನಿರ್ದೇಶನ, ರಾಜೇಶ್ ರಾಮನಾಥ್ ಹಿನ್ನಲೆ ಸಂಗೀತ ಹಾಗೂ ಗಗನ್ ಗೌಡ, ವಿನಯ್ ಗೌಡ, ಜಗನ್ ಬಾಬು ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಶ್ರೀಹಾನ್, ದೀಪಕ್, ಉಗ್ರಂ ರವಿ, ಸಂಭ್ರಮಶ್ರೀ, ರಾಜು, ರಂಜನ್, ಅಜಯ್ ಶರ್ಮ ಮುಂತಾದವರು ತಾರಾಬಳಗದಲ್ಲಿದ್ದಾರೆ. ಜನವರಿ 15ರಂದು ಚಿತ್ರ ಬಿಡುಗಡೆಯಾಗಲಿದೆ’ ಎಂದಿದ್ದಾರೆ ಲೋಕಲ್ ಲೋಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT