ADVERTISEMENT

ಏ.15ರಿಂದ ‘ಉತ್ತರಕಾಂಡ’ ಪ್ರವೇಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 0:30 IST
Last Updated 5 ಏಪ್ರಿಲ್ 2024, 0:30 IST
ಧನಂಜಯ 
ಧನಂಜಯ    

‘ರತ್ನನ್‌ ಪ್ರಪಂಚ’ ಸಿನಿಮಾ ಯಶಸ್ಸಿನ ಬಳಿಕ ಕೆ.ಆರ್.ಜಿ ಸ್ಟುಡಿಯೋಸ್, ನಟ ಡಾಲಿ ಧನಂಜಯ ಮತ್ತು ರೋಹಿತ್ ಪದಕಿ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ಸಿನಿಮಾ ‘ಉತ್ತರಕಾಂಡ’. ಸಿನಿಮಾದ ಪಾತ್ರಗಳಿಗೆ ಇತ್ತೀಚಗಷ್ಟೇ ಅಡಿಷನ್‌ ನಡೆದಿದ್ದು, ಸಿನಿಮಾದ ಚಿತ್ರೀಕರಣ ಏ.15ರಿಂದ ಆರಂಭವಾಗಲಿದೆ. 

ಖ್ಯಾತ ಹಿಂದಿ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ‘ಉತ್ತರಕಾಂಡ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂದು ಚಿತ್ರತಂಡ ಘೋಷಿಸಿದೆ. ‘ದೇವ್ ಡಿ’, ‘ಕ್ವೀನ್’, ‘ವೇಕ್ ಅಪ್ ಸಿಡ್’, ‘ಕೈ ಪೋ ಚೆ’, ‘ಲೂಟೇರಾ’, ‘ಉಡ್ತಾ ಪಂಜಾಬ್’, ‘ಅಂಧಾದುನ್’, ‘ಸೈ ರಾ‌ ನರಸಿಂಹ ರೆಡ್ಡಿ’ ಮುಂತಾದ ಚಿತ್ರಗಳಿಗೆ ಅಮಿತ್‌ ಸಂಗೀತ ನೀಡಿದ್ದಾರೆ. 

‘ಉತ್ತರಕಾಂಡ’ ಚಿತ್ರದ ಮೂಲಕ ನಾವು ಉತ್ತರ ಕರ್ನಾಟಕದ ನಾಟಿ ಮತ್ತು ಹಳ್ಳಿಗಾಡಿನ ಕಥೆಯನ್ನು ಹೇಳುತ್ತಿದ್ದೇವೆ. ಇಂತಹಾ ಸ್ಥಳೀಯ ಭಾವನೆಯನ್ನು ಉಂಟು ಮಾಡುವ ಕಥೆಗೆ ಅಮಿತ್ ಸಂಗೀತ ಸಾಥ್ ನೀಡಲಿದೆ’ ಎನ್ನುತ್ತಾರೆ ರೋಹಿತ್‌. ಆ್ಯಕ್ಷನ್ ಡ್ರಾಮಾ ಕಥಾಹಂದರದ ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್ ಕುಮಾರ್ ಮತ್ತು ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ಸ್ಥಾನದಿಂದ ರಮ್ಯಾ ಹೊರನಡೆದ ಬಳಿಕ, ಆ ಪಾತ್ರಕ್ಕೆ ಪರ್ಯಾಯದ ಹುಡುಕಾಟ ನಡೆಸುತ್ತಿದೆ ಚಿತ್ರತಂಡ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.