ಬಹುತೇಕ ಹೊಸಬರಿಂದಲೇ ಕೂಡಿರುವ ‘ಬ್ಲ್ಯಾಕ್ ಶೀಪ್’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಜೀವನ್ ಹಳ್ಳಿಕಾರ್ ಚಿತ್ರಕಥೆ, ನಿರ್ದೇಶನವಿದೆ. ಅಶ್ವಿನಿ ಗುರುಚರಣ್ ಬಂಡವಾಳ ಹೂಡಿದ್ದಾರೆ.
‘ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ಸಿನಿಮಾ. ಉಪೇಂದ್ರ ಅಭಿಮಾನಿಯಾಗಿ, ಅವರಿಂದ ಸ್ಫೂರ್ತಿಗೊಂಡು ಈ ಸಿನಿಮಾ ಮಾಡಿರುವೆ. ಒಂದಷ್ಟು ನೈಜ ಘಟನೆಗಳನ್ನು ಸಿನಿಮಾದಲ್ಲಿ ಬಳಸಲಾಗಿದೆ. ನಾಯಕ ಮತ್ತು ಖಳನಾಯಕರ ನಡುವೆ ನಡೆಯುವ ಸಂಘರ್ಷದಲ್ಲಿ ನಾಯಕನಿಗೆ ಬದುಕಿನ ಕೆಲ ಘಟನೆಗಳು ಮರೆತು ಹೋಗುತ್ತವೆ. ನಾಯಕ ಹಾಗೆ ಮರೆತ ವಿಷಯಗಳನ್ನು ಹುಡುಕಲು ಯಾವ ರೀತಿ ಪ್ರಾರಂಭಿಸುತ್ತಾನೆ ಎಂಬುದೇ ಚಿತ್ರಕಥೆ. ಬೆಂಗಳೂರು, ಮಂಗಳೂರು, ಮುಂಬೈ ಮೊದಲಾದೆಡೆ ಚಿತ್ರೀಕರಣ ನಡೆಸಲಾಗಿದೆ’ ಎಂದರು ನಿರ್ದೇಶಕರು.
ವಿಶಾಲ್‌ಕಿರಣ್‌ಗೆ ಶಿವಾಂಗಿದಾವೆ ಜೋಡಿಯಾಗಿದ್ದಾರೆ. ಖಳನಾಗಿ ಪ್ರಶಾಂತ್.ವಿ.ಹರಿ ನಟಿಸಿದ್ದಾರೆ. ನಿಶಾ ಹೆಗಡೆ, ಸಿದ್ಲುಂಗು ಶ್ರೀಧರ್, ಕೃಷ್ಣಹೆಬ್ಬಾಳೆ, ಸುಂದರ್‌ವೀಣಾ, ಪುನೀತ್, ದೀಪಿಕಾ ಅಡ್ತಲೆ ಮುಂತಾದವರು ಅಭಿನಯಿಸಿದ್ದಾರೆ. ಅಭಿಜಿತ್‌ಮಹೇಶ್-ಶೈಲೇಶ್ ಕುಮಾರ್ ಸಾಹಿತ್ಯದ ಗೀತೆಗಳಿಗೆ ಸಿದ್ಧಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ದೇವು ಛಾಯಾಚಿತ್ರಗ್ರಹಣ, ಎಸ್.ಆಕಾಶ್ ಮಹೇಂದ್ರಕರ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.