ADVERTISEMENT

Kannada Movies: ‘ಅಪ್ಸರೆ’ಯಾದ ಬೃಂದಾ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 20:34 IST
Last Updated 16 ಅಕ್ಟೋಬರ್ 2025, 20:34 IST
ಬೃಂದಾ ಆಚಾರ್ಯ 
ಬೃಂದಾ ಆಚಾರ್ಯ    

‘ಚಾರ್ಲಿ’ ಸೇರಿದಂತೆ ಕನ್ನಡದ ಪ್ರಮುಖ ಚಿತ್ರಗಳಿಗೆ ವಿಎಫ್‌ಎಕ್ಸ್‌ ಮಾಡಿರುವ ಅಭಿಷೇಕ್‌ ಎಂ. ಚೊಚ್ಚಲ ನಿರ್ದೇಶನದ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಸಿನಿಮಾದ ‘ಅಕ್ಕರೆ ಆಗಿದೆ ಅಪ್ಸರೆ ಮೇಲೆ...’ ಹಾಡು ಬಿಡುಗಡೆಯಾಗಿದೆ. 

‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಾಣದ, ‘ದಿಯಾ’, ‘ದಸರಾ’, ‘ಕೆಟಿಎಂ’ ಮೂಲಕ ಗುರುತಿಸಿಕೊಂಡಿರುವ ನಟ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಚಿತ್ರ ಇದಾಗಿದೆ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿಗೆ ಜೋಡಿಯಾಗಿ ‘ಪ್ರೇಮಂ ಪೂಜ್ಯಂ’ ಹಾಗೂ ‘ಕೌಸಲ್ಯಾ ಸುಪ್ರಜಾ ರಾಮ’ ಖ್ಯಾತಿಯ ಬೃಂದಾ ಆಚಾರ್ಯ ನಟಿಸಿದ್ದಾರೆ. ಸಾಧುಕೋಕಿಲ, ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಿನಿಮಾದಲ್ಲಿ ‘ಟೈಗರ್‌’ ಎನ್ನುವ ಪಾತ್ರದಲ್ಲಿ ದೀಕ್ಷಿತ್‌ ನಟಿಸಿದ್ದು, ಇದೊಂದು ಬ್ಯಾಂಕ್‌ ಕಳ್ಳತನಕ್ಕೆ ಸಂಬಂಧಿಸಿದ ಕಥೆ ಹೊಂದಿದೆ. ಥ್ರಿಲ್‌ ಜೊತೆಗೆ ಹಾಸ್ಯಮಯ ನಿರೂಪಣೆಯಲ್ಲಿ ಚಿತ್ರಕಥೆಯಿದ್ದು, ಪ್ರೇಕ್ಷಕರನ್ನು ಹಿಡಿದು ಕೂರಿಸಬಲ್ಲ ಮನರಂಜನಾತ್ಮಕ ಚಿತ್ರವಿದು ಎಂದಿದೆ ಚಿತ್ರತಂಡ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.