ಶರಾವತಿ ನದಿಯನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿಗಾಗಿ ನಿರ್ಮಾಣವಾಗಿರುವ ‘ಶರಾವತಿ ಸಾಂಗತ್ಯ’ ಎಂಬ ಕಿರುಚಿತ್ರ ದೆಹಲಿಯ ರಾಷ್ಟ್ರೀಯಮಟ್ಟದ ನದಿ ಉತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿದೆ.
ಗಣೇಶ ಯಾಜಿ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಇದು ಶರಾವತಿ ನದಿಯ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸುತ್ತಾ ಅದರ ಉಳಿವಿನ ಬಗ್ಗೆ ಜಾಗೃತಿ ಸಾರಲು’ ನಿರ್ಮಿಸಿದ ಕಿರುಚಿತ್ರ ಎಂದಿದೆ ತಂಡ. ಯಾಜಿ ಮತ್ತು ತಂಡ ಮೈಸೂರು ಸಿನಿಮಾ ಸೊಸೈಟಿ ಸಹಯೋಗದಲ್ಲಿ ನಿರ್ಮಿಸಿದೆ. ಇದು ಕಾವ್ಯಾತ್ಮಕವಾಗಿ ಬಗೆಬಗೆಯ ರೂಪಕಗಳಿಂದ ವಿಭಿನ್ನ ನಿರೂಪಣಾ ಶೈಲಿಯನ್ನು ಒಳಗೊಂಡಿದೆ. 29 ನಿಮಿಷಗಳ ಈ ಕಿರುಚಿತ್ರವು ಶೀಘ್ರದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದಿದೆ ತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.