ADVERTISEMENT

'ನಾಟು ನಾಟು' ಹಾಡು ಜಹಾಂಗೀರ್‌ಗೆ ಬಹಳ ಪ್ರಿಯ: ನಟಿ ಕರೀನಾ

ಐಎಎನ್ಎಸ್
Published 17 ಮಾರ್ಚ್ 2023, 10:43 IST
Last Updated 17 ಮಾರ್ಚ್ 2023, 10:43 IST
ಕರೀನಾ ಕಪೂರ್‌ ಖಾನ್
ಕರೀನಾ ಕಪೂರ್‌ ಖಾನ್   

ಮುಂಬೈ: 'ನನ್ನ ಕಿರಿಯ ಮಗ ಜಹಾಂಗೀರ್ ಆಸ್ಕರ್ ಪ್ರಶಸ್ತಿ ಪಡೆದ 'ನಾಟು ನಾಟು' ಹಾಡಿಗೆ ನೃತ್ಯ ಮಾಡಲು ಇಷ್ಟಪಡುತ್ತಾನೆ' ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹೇಳಿದ್ದಾರೆ.

ಟಾಕ್ ಶೋ 'ವಾಟ್ ವುಮೆನ್ ವಾಂಟ್' ತನ್ನ ನಾಲ್ಕನೇ ಆವೃತ್ತಿಯು ಶುಕ್ರವಾರ ಪ್ರಾರಂಭವಾಗಿದೆ. ಈ ವೇಳೆ ನಟಿ ಕರೀನಾ ತಮ್ಮ ಮಗ 'ನಾಟು ನಾಟು' ಹಾಡನ್ನು ಕೇಳಿದಾಗ ಮಾತ್ರ ಊಟ ಮಾಡುತ್ತಾನೆ ಎಂದು ‘ಐಎಎನ್‌ಎಸ್‌’ ಸುದ್ಧಿ ಸಂಸ್ಥೆಗೆ ತಿಳಿಸಿದ್ದಾರೆ.

ಜಹಾಂಗೀರ್ ಹಿಂದಿ ಡಬ್ ಹಾಡಿಗಿಂತ ತೆಲುಗು ಮೂಲ ಹಾಡನ್ನುಇಷ್ಟಪಡುತ್ತಾನೆ ಎಂದರಲ್ಲದೆ, 'ನಾಟು ನಾಟು' ಹಾಡು 2 ವರ್ಷದ ಮಗುವಿನ ಹೃದಯವನ್ನು ಸ್ಪರ್ಶಿಸುತ್ತಿದೆ ಎಂದಾದರೆ ಹಾಡಿನ ಸಂಯೋಜನೆ ಅದ್ಭುತವಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

95ನೇ ಆಸ್ಕರ್‌ ಪ್ರಶಸ್ತಿ ಪ್ರದಾನದಲ್ಲಿ ಭಾರತವು ಎರಡು ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದು ಭಾರತೀಯರಿಗೆ ಹೆಮ್ಮೆಪಡುವ ವಿಷಯವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಶ್ಲಾಘನೆ ತಂದುಕೊಂಡುತ್ತಿದೆ ಎಂದು ಕರೀನಾ ತಿಳಿಸಿದ್ದಾರೆ.

'ಇತ್ತಿಚೀನ ದಿನಗಳಲ್ಲಿ ಪ್ರೇಕ್ಷಕರು ಹಿಂದಿ ಚಲನಚಿತ್ರಗಳು, ಪ್ರಾದೇಶಿಕ ಚಿತ್ರಗಳು, ಸಾಕ್ಷ್ಯಚಿತ್ರಗಳನ್ನು ಹೆಚ್ಚು ವೀಕ್ಷಿಸಿಸುತ್ತಿದ್ದಾರೆ. ಇದು ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಜನರು ಭಾರತೀಯ ಚಿತ್ರರಂಗವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಪ್ರೇಕ್ಷಕರಿಗೆ ಧನ್ಯವಾದಗಳನ್ನು' ಹೇಳಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.