ADVERTISEMENT

ಕೋಲಾರ | ‘KD’ ಸಿನಿಮಾ ಬಿಡುಗಡೆಗೆ ಸಿದ್ಧತೆ: ದೇವರ ಮೊರೆ ಹೋದ ನಟ ಧ್ರುವ ಸರ್ಜಾ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:38 IST
Last Updated 21 ಸೆಪ್ಟೆಂಬರ್ 2025, 5:38 IST
   

ಕೋಲಾರ: ಕೆಲವೇ ದಿನಗಳಲ್ಲಿ ತಮ್ಮ ಬಹುನಿರೀಕ್ಷೆಯ ಕೆ‌‌.ಡಿ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ನಟ ಧ್ರುವ ಸರ್ಜಾ ದೇವರ ಮೊರೆ ಹೋಗಿದ್ದಾರೆ.

ಕೋಲಾರ ತಾಲ್ಲೂಕಿನ ಕೋರಗಂಡನಹಳ್ಳಿಯ ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ವಿಶೇಷ ಹೋಮ, ಪೂಜೆ ನೆರವೇರಿಸಿದ್ದಾರೆ. ದೇವಾಲಯದಲ್ಲಿ ಅಮಾವಾಸ್ಯೆ ಪೂಜೆಯಲ್ಲಿ ಭಾಗಿಯಾಗಿದ್ದರು.

ಈ ದೇಗುಲ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಧ್ರುವ ಸರ್ಜಾ ಅವರ ಜೊತೆಯಲ್ಲಿ ಬೆಂಗಳೂರು ಪೂರ್ವ ವಲಯದ ಡಿಸಿಪಿ ಡಿ.ದೇವರಾಜ್ ಇದ್ದರು. ಅವರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.