ADVERTISEMENT

ನಿರ್ಮಾಪಕಿಯಾಗಲು ಖುಷ್ಬು ಸ್ಫೂರ್ತಿ: ನವ ನಿರ್ಮಾಪಕಿ ತನಿಶಾ ಕುಪ್ಪಂಡ ಮಾತುಗಳು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 23:43 IST
Last Updated 30 ಅಕ್ಟೋಬರ್ 2025, 23:43 IST
<div class="paragraphs"><p>ತನಿಶಾ ಕುಪ್ಪಂಡ</p></div>

ತನಿಶಾ ಕುಪ್ಪಂಡ

   

ಬೆಂಗಳೂರು: ಕೋಮಲ್ ನಟನೆಯ ಕೋಣ ಸಿನಿಮಾ ಮೂಲಕ ನಿರ್ಮಾಪಕಿಯಾಗಿರುವ ತನಿಶಾ ಕುಪ್ಪಂಡ ಅವರು ಪ್ರಜಾವಾಣಿಯೊಂದಿಗೆ ಮಾತನಾಡಿದರು.

ಇಂದು ಕೋಣ ಸಿನಿಮಾ ಬಿಡುಗಡೆಯಾಗುತ್ತಿದೆ.

ADVERTISEMENT

‘ನಿರ್ಮಾಣ ಕೆಲಸ ಸುಲಭದ್ದಲ್ಲ’ ಎಂದು ಮಾತು ಆರಂಭಿಸಿದ ತನಿಶಾ ಕುಪ್ಪಂಡ ‘ಈ ಹಿಂದೆ ಕೇವಲ ನಟಿಯಾಗಿ ಸೆಟ್‌ ಪ್ರವೇಶಿಸುತ್ತಿದ್ದೆ. ಈ ಸಿನಿಮಾ ಮೂಲಕ ಹೊಸ ಜವಾಬ್ದಾರಿ ಹೊತ್ತುಕೊಂಡೆ. 2018–19ರಲ್ಲಿ ‘ಲಕ್ಷ್ಮಿ ಸ್ಟೋರ್ಸ್‌’ ಎಂಬ ಧಾರಾವಾಹಿ ಮಾಡುತ್ತಿದ್ದೆ. ಇದಕ್ಕೆ ನಟಿ ಖುಷ್ಬು ಅವರು ನಿರ್ಮಾಪಕಿಯಾಗಿದ್ದರು. ಧಾರಾವಾಹಿಯಲ್ಲಿ ಅವರ ಜೊತೆ ನಟಿಸಿದ್ದೆ. ಅವರನ್ನು ನಿರ್ಮಾಪಕಿಯಾಗಿ ನೋಡಿದಾಗ ನಾನೂ ನಿರ್ಮಾಪಕಿಯಾಗಬೇಕು ಎನ್ನುವ ಆಸೆ ಹುಟ್ಟಿತ್ತು ಎನ್ನುತ್ತಾರೆ.

ಹಲವು ತಾಂತ್ರಿಕ ವಿಷಯಗಳನ್ನು ಈ ಸಿನಿಮಾ ಮೂಲಕ ಕಲಿತೆ. ಕೋಮಲ್‌ ಅವರ ಸಲಹೆಗಳಿಂದಾಗಿ ನಿರ್ಮಾಣ ವೆಚ್ಚದಲ್ಲಿ ಲಕ್ಷಾಂತರ ರೂಪಾಯಿ ಉಳಿಸಿದ್ದೇವೆ. ಇಲ್ಲಿಯವರೆಗೂ ಗ್ಲ್ಯಾಮರಸ್‌ ಪಾತ್ರಗಳನ್ನು ನಿಭಾಯಿಸಿದ್ದೇನೆ. ಇದರಲ್ಲಿ ಡಿಗ್ಲ್ಯಾಮರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು.

ಇಲ್ಲಿಯವರೆಗೂ ನನಗೆ ಇಂತಹ ಅವಕಾಶಗಳನ್ನು ಯಾರೂ ನೀಡಿಲ್ಲ ಎನ್ನುವ ಬೇಸರವಿದೆ. ನನ್ನೊಳಗಿನ ನಟನೆಯ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಸಿನಿಮಾ ಅವಕಾಶ ನೀಡಿದೆ ಎನ್ನುವ ಖುಷಿಯೂ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.