ADVERTISEMENT

‘ಉಂಡೆನಾಮ’ ಹಾಕಲಿದ್ದಾರೆ ಕೋಮಲ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 10:01 IST
Last Updated 20 ಮಾರ್ಚ್ 2023, 10:01 IST
ಕೋಮಲ್‌ – ಧನ್ಯಾ ಬಾಲಕೃಷ್ಣ
ಕೋಮಲ್‌ – ಧನ್ಯಾ ಬಾಲಕೃಷ್ಣ   

ನಟ ಕೋಮಲ್‌ ಅಭಿನಯದ ಹೊಸದೊಂದು ನಗೆಗುಳಿಗೆ ಸಿದ್ಧವಾಗುತ್ತಿದೆ. ಈ ಬಾರಿ ಕೋಮಲ್‌ ‘ಉಂಡೆನಾಮ’ ಹಿಡಿದುಕೊಂಡು ಬಂದಿದ್ದಾರೆ. ಚಿತ್ರದ ಶೀರ್ಷಿಕೆ ಇತ್ತೀಚೆಗೆ ಘೋಷಣೆಯಾಗಿದೆ. ಚಂದನವನದ ಪ್ರಮುಖ ನಟ ನಟಿಯರು ಚಿತ್ರದ ಶೀರ್ಷಿಕೆಯನ್ನು ಹೇಳಿ ಬಿಡುಗಡೆ ಮಾಡಿಯೇಬಿಟ್ಟರು. ಮಾತ್ರವಲ್ಲ. ಚಿತ್ರವೂ ಕೂಡಾ ಏಪ್ರಿಲ್‌ 14ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕೋಮಲ್ ಅವರ ಜತೆ ಹರೀಶ್ ರಾಜ್, ಧನ್ಯಾ ಬಾಲಕೃಷ್ಣ, ತಬಲಾನಾಣಿ, ಅಪೂರ್ವಾ, ವೈಷ್ಣವಿ, ತನಿಷಾ ಕುಪ್ಪಂಡ, ಬ್ಯಾಕ್ ಜನಾರ್ದನ್‌ ನಟಿಸಿದ್ದಾರೆ.

ಈ ಚಿತ್ರವನ್ನು ಎನ್.ಕೆ. ಸ್ಟುಡಿಯೋಸ್ ಲಾಂಛನದ ಅಡಿಯಲ್ಲಿ ಸಿ.ನಂದಕಿಶೋರ್ ಅವರು ನಿರ್ಮಿಸಿದ್ದಾರೆ.
ಕೆ.ಎಲ್.ರಾಜಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ಸಂಭ್ರಮ ಅವರ ಸಂಗೀತ, ನವೀನ್‌ ಕುಮಾರ್ ಛಾಯಾಗ್ರಾಹಣ, ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.