ADVERTISEMENT

ಬಾಡಿಗೆ ತಾಯಿಯಾಗಲು ಸಮ್ಮತಿಸಿದ ಕೃತಿ ಸನೊನ್‌

ಏಜೆನ್ಸೀಸ್
Published 29 ಏಪ್ರಿಲ್ 2019, 20:00 IST
Last Updated 29 ಏಪ್ರಿಲ್ 2019, 20:00 IST
ಕೃತಿ ಸನೊನ್‌
ಕೃತಿ ಸನೊನ್‌   

ನಿರ್ದೇಶಕ ಲಕ್ಷ್ಮಣ್‌ ಉಟೇಕರ್‌ ಮತ್ತು ನಿರ್ಮಾಪಕ ದಿನೇಶ್‌ ವಿಜಾನ್‌ ಹೊಸ ಚಿತ್ರಕ್ಕೆ ತಮ್ಮ ‘ಲುಕಾ ಚುಪ್ಪಿ’ ನಾಯಕಿ ಕೃತಿ ಸನೊನ್‌ ಅವರ ಕಾಲ್‌ಶೀಟ್‌ ಪಡೆದಿದ್ದಾರೆ. ಬಾಡಿಗೆ ತಾಯಿಯ ಕುರಿತು ಸಿನಿಮಾಕ್ಕಾಗಿ ಚಿತ್ರಕತೆಯೊಂದನ್ನು ಈ ಜೋಡಿ ಅಂತಿಮಗೊಳಿಸುತ್ತಿದೆ. ಆದರೆ ಚಿತ್ರಕ್ಕೆ ‘ಮಮ್ಮಾ ಮಿಯಾ’ ಎಂಬ ಶೀರ್ಷಿಕೆ ಅಂತಿಮಗೊಂಡಿದೆ.

‘ಬರೇಲಿ ಕಿ ಬರ್ಫಿ‘ ಚಿತ್ರದ ಬೆನ್ನಲ್ಲೇ ‘ಲುಕಾ ಚುಪ್ಪಿ‘ ಕೂಡಾ ಭರ್ಜರಿ ಯಶಸ್ಸು ಕಂಡಿರುವ ಕಾರಣ ಕೃತಿ ಈಗ ಬಿ ಟೌನ್‌ನಲ್ಲಿ ತಮ್ಮ ತಾರಾಮೌಲ್ಯ ಹೆಚ್ಚಿಸಿಕೊಂಡಿದ್ದಾರೆ.

ಮೆಡಾಕ್‌ ಫಿಲ್ಮ್ಸ್‌ ನಿರ್ಮಿಸಿದ್ದ ಮರಾಠಿಯ ‘ಮಲಾ ಆಯಿ ವ್ಹಾಯ್‌ಚಿ’ ಚಿತ್ರವೂ ಬಾಡಿಗೆ ತಾಯಿಯ ಕತೆಯನ್ನು ಒಳಗೊಂಡಿತ್ತು. ಆದರೆ ಮರಾಠಿ ಚಿತ್ರಕ್ಕಿಂತ ಸಂಪೂರ್ಣ ಭಿನ್ನವಾದ ಚೌಕಟ್ಟಿನಲ್ಲಿ ‘ಮಮ್ಮಾ ಮಿಯಾ‘ದ ಕತೆ ಸಾಗಬೇಕು. ಹಾಗಾಗಿ ಚಿತ್ರಕತೆಗೆ ಹೊಸ ರೂಪ ನೀಡಿದ್ದೇವೆ’ ಎಂದು ದಿನೇಶ್‌ ವಿಜಾನ್‌ ಹೇಳಿದ್ದಾರೆ.

ADVERTISEMENT

‘ಅರ್ಜುನ್‌ ಪಟಿಯಾಲಾ’, ಬಹು ತಾರಾಗಣದ ‘ಹೌಸ್‌ಫುಲ್‌ 4‘ ಮತ್ತು ಅಶುತೋಷ್‌ ಗೋವರಿಕರ್‌ ಅವರ ‘ಪಾಣಿಪ್‌‘ಗೆ ಕೃತಿ ಈಗಾಗಲೇ ಸಹಿ ಹಾಕಿದ್ದಾರೆ.

ಬಾಡಿಗೆ ತಾಯಿಯ ಕುರಿತು ಕಥಾವಸ್ತುವುಳ್ಳ ಸಿನಿಮಾಗಳು ಈ ಹಿಂದೆಯೂ ತೆರೆಕಂಡಿವೆ. ಸುಷ್ಮಿತಾ ಸೇನ್‌ ನಟಿಸಿದ್ದ ‘ಫಿಲ್‌ಹಾಲ್‌’, ಸಲ್ಮಾನ್‌ ಖಾನ್‌ ನಾಯಕನಟನಾಗಿ ಅಭಿನಯಿಸಿದ್ದ ‘ಚೋರಿ ಚೋರಿ ಚುಪ್ಕೆ ಚುಪ್ಕೆ‘ ಮುಂತಾದವು ಅಂತಹ ಪ್ರಮುಖ ಸಿನಿಮಾಗಳು. ಆದರೆ ಈಗಾಗಲೇ ಪ್ರೇಕ್ಷಕರು ಕಂಡಿರುವ ಯಾವುದೇ ಸಿನಿಮಾದಲ್ಲಿ ಕಾಣದಂತಹ ಕಥಾವಸ್ತು, ಸನ್ನಿವೇಶಗಳನ್ನು ‘ಮಮ್ಮಾ ಮಿಯಾ’ದಲ್ಲಿ ತೋರಿಸಲಿದ್ದೇವೆ ಎಂದು ನಿರ್ಮಾಪಕ–ನಿರ್ದೇಶಕ ಜೋಡಿ ಸ್ಪಷ್ಟಪಡಿಸಿದೆ.ಇದೇ ವರ್ಷ ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.