ADVERTISEMENT

‘ಲಂಬೋದರ 2.0’ ಎಂದ ಸುನಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 13:22 IST
Last Updated 18 ಜನವರಿ 2026, 13:22 IST
ಅನಿಲ್‌ ಶೆಟ್ಟಿ, ಸಾಚಿ ಬಿಂದ್ರಾ
ಅನಿಲ್‌ ಶೆಟ್ಟಿ, ಸಾಚಿ ಬಿಂದ್ರಾ   

ನಿರ್ದೇಶಕ ಸಿಂಪಲ್‌ ಸುನಿ ಬಳಿ ಸಾಲು, ಸಾಲು ಸಿನಿಮಾಗಳಿವೆ. ಅವುಗಳ ನಡುವೆ ಅವರು ‘ಲಂಬೋದರ 2.0’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.

‘ಈ ಬಾರಿ ಎಐ ಆಧಾರಿತ ಸಾಮಾಜಿಕ, ಥ್ರಿಲ್ಲರ್‌ ಕಥಾಹಂದರದ ಚಿತ್ರವನ್ನು ಶುರು ಮಾಡುತ್ತಿದ್ದೇನೆ. ಜತೆಗೆ ಈ ಚಿತ್ರದಿಂದ ಇಬ್ಬರು ಹೊಸ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇವೆ. ನಾಯಕನಾಗಿ ಅನಿಲ್ ಶೆಟ್ಟಿ, ನಾಯಕಿಯಾಗಿ ಸಾಚಿ ಬಿಂದ್ರಾ ನಟಿಸಲಿದ್ದಾರೆ. ಅನಿಲ್ ಶೆಟ್ಟಿ ಕೇವಲ ನಟ ಮಾತ್ರ ಅಲ್ಲ, ಈ ಚಿತ್ರದ ಲೇಖಕ ಕೂಡ. ಅವರದ್ದೇ ನಿರ್ಮಾಣ ಸಂಸ್ಥೆ ಮಾಸ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಸದ್ಯ ಚಿತ್ರ ಪ್ರೀಪ್ರೊಡಕ್ಷನ್‌ ಹಂತದಲ್ಲಿದೆ’ ಎಂದು ಸುನಿ ಹೇಳಿದ್ದಾರೆ. 

ಸಾಚಿ ಬಿಂದ್ರಾ ಈಗಾಗಲೇ ಬಾಲಿವುಡ್ ಚಿತ್ರವೊಂದರಲ್ಲಿ, ನಟಿಸಿದ್ದು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಜೆನ್‌ಜಿಗಳಿಗೆ ಬೇಕಾದ, ಹಾಸ್ಯಮಯ ಕಥಾಹಂದರವನ್ನು ಈ ಚಿತ್ರ ಹೊಂದಿದೆ. 

ADVERTISEMENT

ಚಿತ್ರಕ್ಕೆ ವೀರ್‌ ಸಮರ್ಥ್‌ ಸಂಗೀತ, ಸಂತೋಷ್‌ ರೈ ಪತಾಜೆ ಛಾಯಾಚಿತ್ರಗ್ರಹಣವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.