ADVERTISEMENT

'ಲವ್‌ ಬರ್ಡ್ಸ್‌’ ಆದ ಡಾರ್ಲಿಂಗ್‌ ಕೃಷ್ಣ, ಆಶಿಕಾ ರಂಗನಾಥ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 9:49 IST
Last Updated 12 ಅಕ್ಟೋಬರ್ 2021, 9:49 IST
ಡಾರ್ಲಿಂಗ್‌ ಕೃಷ್ಣ
ಡಾರ್ಲಿಂಗ್‌ ಕೃಷ್ಣ   

‘ಲವ್‌ ಬರ್ಡ್ಸ್’ ಚಿತ್ರ ಸೆಟ್ಟೇರಿದೆ. ಇತ್ತೀಚೆಗೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಚಿತ್ರೀಕರಣಕ್ಕೆ ಚಾಲನೆ ನೀಡಿದರು.ಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಚಂದ್ರು ಕಡ್ಡಿಪುಡಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಪಿ.ಸಿ.ಶೇಖರ್ ನಿರ್ದೇಶನವಿದೆ. ಡಾರ್ಲಿಂಗ್‌ ಕೃಷ್ಣ ನಾಯಕ. ಅವರದ್ದು ಸಾಫ್ಟ್‌ವೇರ್‌ ಎಂಜಿನಿಯರ್‌ ಪಾತ್ರ. ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ.

‘ಇದೊಂದು ಕಾರ್ಪೊರೇಟ್ ಶೈಲಿಯ ಚಿತ್ರ. ಅರ್ಜುನ್ ಜನ್ಯ ಅವರ ರಾಗ ಸಂಯೋಜನೆಯಲ್ಲಿ ಉತ್ತಮ ಹಾಡುಗಳು ಮೂಡಿಬರಲಿವೆ. ಎರಡು, ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮೊದಲ ಹಂತ ಬೆಂಗಳೂರಿನಲ್ಲಿ, ಮುಂದಿನ ಹಂತ ಮಂಡ್ಯ ಭಾಗದಲ್ಲಿ ನಡೆಯಲಿದೆ’ ಎಂದರು.

ADVERTISEMENT

ರಂಗಾಯಣ ರಘು ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.