ADVERTISEMENT

ಜುಲೈ 25ಕ್ಕೆ 3ಡಿಯಲ್ಲಿ ಬರಲಿದೆ ‘ಮಹಾವತಾರ್‌ ನರಸಿಂಹ’ ಅನಿಮೇಟೆಡ್ ಸಿನಿಮಾ

ಚಿತ್ರಕ್ಕೆ ಯು/ಎ ಪ್ರಮಾಣಪತ್ರ: ಹೊಂಬಾಳೆ ಫಿಲ್ಮ್ಸ್ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜುಲೈ 2025, 10:30 IST
Last Updated 20 ಜುಲೈ 2025, 10:30 IST
<div class="paragraphs"><p>‘ಮಹಾವತಾರ್‌ ನರಸಿಂಹ’</p></div>

‘ಮಹಾವತಾರ್‌ ನರಸಿಂಹ’

   

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪ್ರಸ್ತುತಪಡಿಸುತ್ತಿರುವ ‘ಮಹಾವತಾರ್‌ ನರಸಿಂಹ’ ಅನಿಮೇಟೆಡ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಏತನ್ಮಧ್ಯೆ ಈ ಸಿನಿಮಾಕ್ಕೆ ಯು/ಎ ಪ್ರಮಾಣಪತ್ರ ಲಭ್ಯವಾಗಿದ್ದು ಇದೇ ಜುಲೈ 25ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಕುರಿತ ಮಾಹಿತಿಯನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ADVERTISEMENT

‘ಮಹಾವತಾರ್‌ ನರಸಿಂಹ’ ಸಿನಿಮಾ ಸರಣಿಯಾಗಿ ಬಿಡುಗಡೆಯಾಗಲಿದೆ. ಜುಲೈ 25ಕ್ಕೆ ಬಿಡುಗಡೆಯಾಗುತ್ತಿರುವುದು ಮೊದಲನೇ ಭಾಗವಾಗಿದೆ.

ಸಿನಿಮಾವು ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಮುಂದಿನ ದಶಕದವರೆಗೆ ಸಾಗಲಿರುವ ಬೃಹತ್‌ ಆನಿಮೇಟೆಡ್ ಸರಣಿಯ ಮೊದಲ ಅಧ್ಯಾಯವಾಗಿದೆ. ಅಶ್ವಿಕ್‌ ಕುಮಾರ್‌ ಈ ಅಧ್ಯಾಯದ ನಿರ್ದೇಶಕರಾಗಿದ್ದಾರೆ. ಕ್ಲೀಮ್‌ ಪ್ರೊಡಕ್ಷನ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

‘ಈ ಕಥೆಯು ಪ್ರಹ್ಲಾದನ ನಂಬಿಕೆಗೆ ವಿರುದ್ಧವಾಗಿ ನಿಲ್ಲುವ ತಂದೆ ಹಿರಣ್ಯಕಶಿಪುವನ್ನು ಮತ್ತು ಅವನ ಅಹಂಕಾರವನ್ನು ನಾಶಮಾಡಲು ಭೂಮಿಗೆ ಇಳಿದ ದೈವಿಕ ಅವತಾರ ನರಸಿಂಹನ ಉದಯವನ್ನು ಪೌರಾಣಿಕ ಹಿನ್ನೆಲೆಯಲ್ಲಿ, ಗಟ್ಟಿ ತಾಂತ್ರಿಕ ನೆಲೆಗಟ್ಟಿನಲ್ಲಿ ಸಿನಿಮಾ ಮೂಲಕ ಹೇಳಲಾಗುತ್ತಿದೆ’ ಎಂದಿದೆ ತಂಡ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಒಟ್ಟು ಐದು ಭಾಷೆಗಳಲ್ಲಿ 3ಡಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. . ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಮಹಾವತಾರ್‌’ ಯೂನಿವರ್ಸ್‌ನ ಈ ಮೊದಲ ಅಧ್ಯಾಯವನ್ನು ಶಿಲ್ಪಾ ಧವನ್‌, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಈ ಸರಣಿಯಲ್ಲಿ ಮುಂದಿನ ಸಿನಿಮಾಗಳು ಹೀಗಿವೆ, ‘ಮಹಾವತಾರ್ ಪರಶುರಾಮ’(2027), ‘ಮಹಾವತಾರ್ ರಘುನಂದನ’(2029), ‘ಮಹಾವತಾರ್ ಧ್ವಾರಕಾಧೀಶ್’(2031), ‘ಮಹಾವತಾರ್ ಗೋಕುಲನಂದ’(2033), ‘ಮಹಾವತಾರ್ ಕಲ್ಕಿ ಭಾಗ 1’(2035), ‘ಮಹಾವತಾರ್ ಕಲ್ಕಿ ಭಾಗ 2’(2037) ಮೂಡಿಬರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.