ADVERTISEMENT

ಮಲ್ಲಿಕಾಳ ರಾಣಿಲುಕ್‌!

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:45 IST
Last Updated 15 ಜುಲೈ 2019, 19:45 IST
ಮಲ್ಲಿಕಾ
ಮಲ್ಲಿಕಾ   

ಮಲ್ಲಿಕಾ ಶೆರಾವತ್‌ ಇಂಗ್ಲಿಷ್‌ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರದು ರಾಣಿಯ ಪಾತ್ರ. ಚಿತ್ರದ ಫೋಟೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ನಟಿ ಹಂಚಿಕೊಂಡಿದ್ದಾರೆ. ಐತಿಹಾಸಿಕ ಪಾತ್ರದಲ್ಲಿನ ಮಲ್ಲಿಕಾ ಬೋಲ್ಡ್‌ ಲುಕ್‌ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಚಿತ್ರದಲ್ಲಿ ಮಲ್ಲಿಕಾ ಪಾತ್ರಕ್ಕೆಂದು ವಿಭಿನ್ನ ವೇಷಭೂಷಣ ಹಾಗೂ ತಲೆಗೆ ಹೊಸ ವಿನ್ಯಾಸದ ಕಿರೀಟ ತೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ‘ನನ್ನ ಇಂಗ್ಲಿಷ್‌ ಚಿತ್ರ ‘ಟೈಮ್‌ರೈಡರ್ಸ್‌’ನ ವೀರ ರಾಣಿ ಪಾತ್ರಕ್ಕಾಗಿ ತಯಾರಾಗುತ್ತಿದ್ದೇನೆ’ ಎಂದು ಅಡಿಬರಹ ಹಾಕಿ ಪೋಸ್ಟ್‌ ಮಾಡಿದ್ದಾರೆ. ಮಲ್ಲಿಕಾ ಅವರ ಈ ಹೊಸ ಅವತಾರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT