ADVERTISEMENT

‘ಮಾನಾಡು’ ಕನ್ನಡ ಟೀಸರ್ ‌ಕಿಚ್ಚ ಸುದೀಪ್‌ ಅವರಿಂದ ಬಿಡುಗಡೆ

ಕಿಚ್ಚ ಸುದೀಪ್‌ ಅವರಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 16:30 IST
Last Updated 2 ಫೆಬ್ರುವರಿ 2021, 16:30 IST
ಮಾನಾಡು ಟೀಸರ್‌ ಪೋಸ್ಟರ್‌
ಮಾನಾಡು ಟೀಸರ್‌ ಪೋಸ್ಟರ್‌   

ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ಟಿ.ಆರ್. ನಟನೆಯ ‘ಮಾನಾಡು’ ಚಿತ್ರವು ಐದು ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿದ್ದು, ಆಯಾ ಭಾಷೆಯ ಟೀಸರ್‌ಗಳನ್ನು ಹೆಸರಾಂತ ಕಲಾವಿದರು ಬುಧವಾರ ಅನಾವರಣಗೊಳಿಸಲಿದ್ದಾರೆ.

ಫೆ.3 ಸಿಲಂಬರಸನ್‌ ಅವರ ಹುಟ್ಟುಹಬ್ಬ. ಅಂದೇ ಕನ್ನಡ ಟೀಸರನ್ನು ನಟ ಕಿಚ್ಚ ಸುದೀಪ್‌ ಬುಧವಾರ ಮಧ್ಯಾಹ್ನ 2.34ಕ್ಕೆ ಬಿಡುಗಡೆ ಮಾಡಲಿದ್ದಾರೆ.ತಮಿಳು ಭಾಷೆಯ ಟೀಸರ್‌ ಅನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅನಾವರಣಗೊಳಿಸಲಿದ್ದಾರೆ.

ವೆಂಕಟ್‌ಪ್ರಭು ಅವರು ರಾಜಕೀಯ ಕಥಾ ಹಂದರದ ಥ್ರಿಲ್ಲರ್‌ ಅಂಶವುಳ್ಳ ಚಿತ್ರಕಥೆ ರಚಿಸಿ, ನಿರ್ದೇಶಿಸುತ್ತಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್‌ ಈ ಚಿತ್ರದ ನಾಯಕಿ. ಯುವನ್‌ಶಂಕರ್‌ ರಾಜ ಸಂಗೀತ ನೀಡಿದ್ದು, ಸುರೇಶ್‌ ಕಮತ್ಚಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.