ADVERTISEMENT

ನಟಿ ಮಂದಿರಾ ಬೇಡಿ ಪತಿ ರಾಜ್​ ಕೌಶಲ್ ಹೃದಯಾಘಾತದಿಂದ ನಿಧನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 6:03 IST
Last Updated 30 ಜೂನ್ 2021, 6:03 IST
ರಾಜ್‌ ಕೌಶಲ್‌
ರಾಜ್‌ ಕೌಶಲ್‌   

ಮುಂಬೈ: ಬಾಲಿವುಡ್‌ ನಟಿ, ಕಿರುತೆರೆ ನಿರೂಪಕಿ ಮಂದಿರಾ ಬೇಡಿ ಅವರ ಪತಿ, ನಿರ್ಮಾಪಕ ಹಾಗೂ ನಿರ್ದೇಶಕ ರಾಜ್‌ ಕೌಶಲ್‌ ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.

ನಟರೋಹಿತ್ ರಾಯ್ ಟ್ವೀಟ್‌ ಮಾಡಿ, ಇಂದು ಬೆಳಗ್ಗೆರಾಜ್‌ ಕೌಶಲ್‌ ನಮ್ಮನ್ನು ಅಗಲಿದರು ಎಂದು ಟ್ವೀಟ್‌ ಮಾಡಿದ್ದಾರೆ. 2005ರಲ್ಲಿ ತೆರೆಕಂಡ ‘ ಮೈ ಬ್ರದರ್‌ ನಿಖಿಲ್‌‘ ಸಿನಿಮಾದಲ್ಲಿ ನಾನು ಕೌಶಲ್ ಜೊತೆ ಕೆಲಸ ಮಾಡಿದ್ದೆ ಎಂದು ರೋಹಿತ್‌ ರಾಯ್‌ ನೆನಪಿಸಿಕೊಂಡಿದ್ದಾರೆ.

ರಾಜ್‌ ಕೌಶಲ್‌ ನಿಧನಕ್ಕೆ ಬಾಲಿವುಡ್‌ನ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.