ಬೆಂಗಳೂರು: ನಟ ಸುದೀಪ್ ನಟನೆಯ 46ನೇ ಸಿನಿಮಾ ‘ಮ್ಯಾಕ್ಸ್’ 25 ದಿನಗಳ ಯಶಸ್ಸಿ ಪ್ರದರ್ಶನ ಕಂಡಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
‘ಮ್ಯಾಕ್ಸ್’ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ಕಂಡು ನಾನು ಆಭಾರಿಯಾಗಿದ್ದೇನೆ. ತುಂಬಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಕನ್ನಡಿಗರೆಲ್ಲ ಬೆಂಬಲ ನೀಡಿದ್ದಿರಿ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದಿದ್ದಾರೆ.
ಎರಡೂವರೆ ವರ್ಷದ ನಂತರ ಬಂದಿರುವ ನನ್ನ ಚಿತ್ರಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಿದ್ದಕ್ಕೆ ದೊಡ್ಡ ಧನ್ಯವಾದಗಳು ಎಂದಿದ್ದಾರೆ.
ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾವನ್ನು ವಿ ಕ್ರಿಯೇಷನ್ಸ್ ಅಡಿ ಕೆಆರ್‌ಜಿ ನಿರ್ಮಾಣ ಮಾಡಿದೆ. ನಟ ಸುನೀಲ್, ಶರತ್ ಲೋಹಿತಾಶ್ವ, ನಟಿ ಸಂಯುಕ್ತ ಹೊರನಾಡು ಮುಖ್ಯಪಾತ್ರದಲ್ಲಿದ್ದಾರೆ. ಈ ಚಿತ್ರ ಕಳೆದ ಕ್ರಿಸ್‌ಮಸ್ ದಿನ ಬಿಡುಗಡೆಯಾಗಿತ್ತು. ಜೀ5 ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಬಹುದು ಎನ್ನಲಾಗಿದೆ.
ವಿಡಿಯೊ ನೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.