ADVERTISEMENT

ಈತ ಚುಂಬನ ರಾಜ!

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 9:40 IST
Last Updated 9 ಜನವರಿ 2020, 9:40 IST
'ಮೈ ನೇಮ್ ಇಸ್ ರಾಜಾ' ಚಿತ್ರದಲ್ಲಿ ಸೂರ್ಯನ್ ಹಾಗೂ ನಾಯಕಿ
'ಮೈ ನೇಮ್ ಇಸ್ ರಾಜಾ' ಚಿತ್ರದಲ್ಲಿ ಸೂರ್ಯನ್ ಹಾಗೂ ನಾಯಕಿ   
""

ಪರದೆ ಮೇಲೆ ಹಸಿಬಿಸಿ ದೃಶ್ಯಗಳನ್ನು ತೋರಿಸಿದ ಬಳಿಕ ‘ಮೈ ನೇಮ್‌ ಈಸ್‌ ರಾಜಾ’ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಮಾತಿಗೆ ಕುಳಿತುಕೊಂಡಿತು. ನಿರ್ದೇಶಕರು ಮತ್ತು ಚಿತ್ರದ ಹೀರೊ ಬಯಸಿದಂತೆಯೇ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ನೀಡಿದೆಯಂತೆ.

ಟೀಸರ್‌ನಲ್ಲಿ ಯಾವುದೇ ಮುಜುಗರ ಇಲ್ಲದೆಯೇ ನಾಯಕಿ, ಸಹನಟಿಯನ್ನು ಚುಂಬಿಸಿರುವ ನಾಯಕ ರಾಜ್‌ ಸೂರ್ಯನ್ ಮಾತಿನಲ್ಲಿ ಮಾತ್ರ ಮಡಿವಂತಿಕೆ ಪ್ರದರ್ಶನಕ್ಕೆ ಇಳಿದರು. ‘ನನ್ನ ಹೆಂಡತಿ, ಮಗ, ಅಪ್ಪ–ಅಮ್ಮನೊಟ್ಟಿಗೆ ಈ ಚಿತ್ರ ನೋಡಲು ಆಗುವುದಿಲ್ಲ. ಆದರೆ, ಈ ಚಿತ್ರದ ನಾಯಕನಿಗೆ ಹೆಂಡತಿಯೆಂದರೆ ಪಂಚಪ್ರಾಣ. ಎಷ್ಟೇ ಹುಡುಗಿಯರು ಆತನ ಹಿಂದೆ ಬಿದ್ದರೂ ಪತ್ನಿಗೆ ಮಾತ್ರ ತನ್ನ ಪ್ರೀತಿ ಮೀಸಲು ಎಂದು ಬದುಕುತ್ತಿರುತ್ತಾನೆ’ ಎಂದರು.

‘ಸಂಚಾರಿ’ ಮತ್ತು ‘ಜಟಾಯು’ ಸಿನಿಮಾದಲ್ಲಿ ನಟಿಸಿದ್ದೇ. ಆದರೆ, ಆ ಚಿತ್ರಗಳು ಒಳ್ಳೆಯ ಹೆಸರು ತಂದುಕೊಟ್ಟವು. ಆದರೆ, ನಾವು ಹೂಡಿದ್ದ ಹಣ ಬರಲಿಲ್ಲ. ಹಣಕ್ಕಾಗಿಯೇ ಈ ಸಿನಿಮಾ ಮಾಡಿದ್ದೇವೆ. ಜೊತೆಗೆ, ಸಂದೇಶವೂ ಇದೆ’ ಎಂದು ಸಮರ್ಥಿಸಿಕೊಂಡರು.

ADVERTISEMENT

‘ಎನ್‌ಆರ್‌ಐ ಗಂಡ ಮತ್ತು ಹೆಂಡತಿ ನಡುವೆ ನಡೆಯುವ ಕಥೆ ಇದು. ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ’ ಎಂದು ಹೇಳಿದರು ನಿರ್ದೇಶಕ ಅಶ್ವಿನ್‌ ಕೃಷ್ಣ.

ಪ್ರಭುಸೂರ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ನನ್ನ ಸಹೋದರನಿಗೆ ಚಿತ್ರರಂಗದಲ್ಲಿ ಒಳ್ಳೆಯ ಬ್ರೇಕ್‌ ಬೇಕಿದೆ. ಅದಕ್ಕಾಗಿಯೇ ಇಂತಹ ಸಿನಿಮಾ ಮಾಡಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.

ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಮುಂಬೈ ಮೂಲದ ಆಕರ್ಷಿಕಾ ಮತ್ತು ನಸ್ರಿನ್‌ ಈ ಚಿತ್ರದ ನಾಯಕಿಯರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಮೆಲ್ವಿನ್‌ ಸಂಗೀತ ಸಂಯೋಜಿಸಿದ್ದಾರೆ. ವೆಂಕಟ್‌ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.