ADVERTISEMENT

ಅಮೀರ್ ಖಾನ್ ಜೊತೆ 'ಲಾಲ್ ಸಿಂಗ್ ಚಡ್ಡಾ' ಚಿತ್ರ ತಂಡ ಸೇರಿಕೊಂಡ ನಾಗ ಚೈತನ್ಯ

ಪಿಟಿಐ
Published 9 ಜುಲೈ 2021, 15:36 IST
Last Updated 9 ಜುಲೈ 2021, 15:36 IST
ನಾಗಚೈತನ್ಯ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್
ನಾಗಚೈತನ್ಯ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್   

ಮುಂಬೈ: ಇಂದಿನಿಂದ ಕಾರ್ಗಿಲ್‌ನಲ್ಲಿ ಚಿತ್ರೀಕರಣ ಆರಂಭವಾಗಿರುವ ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ಚಿತ್ರದ ತಾರಾಗಣಕ್ಕೆ ತೆಲುಗು ತಾರೆ ನಾಗ ಚೈತನ್ಯ ಸೇರ್ಪಡೆಯಾಗಿದ್ದಾರೆ.

ಈ ಚಿತ್ರವು ಹಾಲಿವುಡ್‌ನ ಹಿರಿಯ ನಟ ಟಾಮ್ ಹ್ಯಾಂಕ್ಸ್ ಅವರ 1994ರ ವಿಶಿಷ್ಟ ಚಿತ್ರ ‘ಫಾರೆಸ್ಟ್ ಗಂಪ್’ನ ರಿಮೇಕ್ ಆಗಿದೆ.

‘100% ಲವ್’, ‘ಮನಂ’, ‘ಮಜಿಲಿ’, ‘ವೆಂಕಿ ಮಾಮಾ’ ಮುಂತಾದ ಸೂಪರ್ ಹಿಟ್ ಚಿತ್ರಗಳ ಮೂಲಕ ಹೆಸರುವಾಸಿಯಾಗಿರುವ 34 ವರ್ಷದ ನಾಗ ಚೈತನ್ಯ, ಅಮೀರ್ ಖಾನ್ ಜೊತೆ ನಟಿಸಲು ಅವಕಾಶ ಸಿಕ್ಕಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ADVERTISEMENT

ಈ ಚಿತ್ರದ ಮೂಲಕ ತೆಲುಗು ನಟ ಚೈತನ್ಯ ಬಾಲಿವುಡ್‌ಗೆ ಎಂಟ್ರಿ ಪಡೆಯುತ್ತಿದ್ದು, ಅಮೀರ್ ಖಾನ್ ಅವರ ಮುಖ್ಯ ಪಾತ್ರದ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಮೀರ್ ಖಾನ್, ನಿರ್ಮಾಪಕಿ ಕಿರಣ್ ರಾವ್ ಮತ್ತು ನಿರ್ದೇಶಕ ಅದ್ವೈತ್ ಚಂದನ್ ಅವರ ಜೊತೆಗಿರುವ ಫೋಟೊವನ್ನು ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿರುವ ನಾಗ ಚೈತನ್ಯ #ಲಾಲ್‌ಸಿಂಗ್ಚಡ್ಡಾ ಅಮೀರ್ ಖಾನ್ ಪ್ರೊಡಕ್ಷನ್ಸ್‌ಗೆ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅಮೀರ್ ಖಾನ್ ಪ್ರೊಡಕ್ಷನ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲೂ ಕೂಡ ಅದೇ ಚಿತ್ರವನ್ನು ಹಂಚಿಕೊಂಡಿದ್ದು, ನಾಗಚೈತನ್ಯಗೆ ಸ್ವಾಗತ ಕೋರಿದ್ದಾರೆ.

‘ಸ್ವಾಗತ ಬಾಲಾ, ಹೃದಯಗಳನ್ನು ಕದಿಯುವವ, ನೀವು ಈಗಾಗಲೇ ನಮ್ಮ ಪ್ರೀತಿಯನ್ನು ಕದ್ದಿದ್ದೀರಿ'ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.