ADVERTISEMENT

ನಮೋ: ಶೀರ್ಷಿಕೆ ಒಂದು, ಅರ್ಥ ಹಲವು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 19:30 IST
Last Updated 5 ಡಿಸೆಂಬರ್ 2019, 19:30 IST
ಪುಟ್ಟರಾಜ್ ಸ್ವಾಮಿ
ಪುಟ್ಟರಾಜ್ ಸ್ವಾಮಿ   

‘ನಮೋ’ ಅಂದರೆ ದೇವರಿಗೆ, ದೇವರ ಸಮಾನರಾದವರಿಗೆ ಅಥವಾ ಅಪಾರ ಗೌರವಕ್ಕೆ ಅರ್ಹರಾದವರಿಗೆ ನಮಸ್ಕರಿಸುವ ಅರ್ಥ ನೀಡುವ ಪದವೊಂದೇ ಅಲ್ಲ. ‘ನಮೋ’ ಪದ ಈಗ ರಾಜಕೀಯ ಅರ್ಥವನ್ನೂ ಹೊಂದಿದೆ. ಹೊಸಬರ ತಂಡವೊಂದು ‘ನಮೋ’ ಹೆಸರಿನಲ್ಲಿ ಒಂದು ಸಿನಿಮಾ ಮಾಡಿದೆ.

ಚಿತ್ರವನ್ನು 2020ರ ಆರಂಭದಲ್ಲಿ ತೆರೆಗೆ ತರುವ ವಿಶ್ವಾಸ ಸಿನಿತಂಡದ್ದು. ಪುಟ್ಟರಾಜ್ ಸ್ವಾಮಿ ಅವರು ಈ ಚಿತ್ರದ ನಿರ್ದೇಶಕ. ಇದು ಅವರಿಗೆ ಮೊದಲ ಸಿನಿಮಾ. ಈ ಚಿತ್ರದ ಕೆಲಸ ಪೂರ್ಣಗೊಳ್ಳುವ ಹಂತ ತಲುಪಿದೆ ಎನ್ನುತ್ತಾರೆ ಪುಟ್ಟರಾಜ್.

ಅವರು ಹೇಳುವ ಪ್ರಕಾರ, ‘ನಮೋ ಅಂದರೆ ಒಳ್ಳೆಯದು. ಕತ್ತಲಿನಿಂದ ಬೆಳಕಿನ ಕಡೆಗೆ ಸಾಗುವ ಸಂದೇಶ ಇದರಲ್ಲಿ ಇದೆ’ ಎಂದು ಅವರು ಹೇಳುತ್ತಾರೆ.ಅಂದಹಾಗೆ, ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು, ಮೋದಿ ಅವರನ್ನು ‘ನಮೋ’ ಎಂದು ಅಭಿಮಾನದಿಂದ ಕರೆಯುವುದಿದೆ. ‘ಈ ಚಿತ್ರಕ್ಕೂ ಮೋದಿ ಅವರಿಗೂ ಏನಾದರೂ ಸಂಬಂಧ ಇದೆಯಾ’ ಎಂದು ಪ್ರಶ್ನಿಸಿದಾಗ, ‘ಆ ಬಗ್ಗೆ ಏನೂ ಹೇಳುವುದಿಲ್ಲ’ ಎಂದು ಪುಟ್ಟರಾಜ್ ಉತ್ತರಿಸಿ, ಸಣ್ಣ ನಗು ಬೀರಿದರು. ‘ಸಂಬಂಧ ಇದ್ದರೂ ಇರಬಹುದು’ ಎನ್ನುವ ಅನುಮಾನ ಮೂಡಿಸಿದರು!

ADVERTISEMENT

‘ಈ ಚಿತ್ರದಲ್ಲಿ ಎಲ್ಲರಿಗೂ ಇಷ್ಟವಾಗುವ ಹೂರಣ ಇದೆ. ಬಹಳ ಕಡಿಮೆ ಅವಧಿಯಲ್ಲಿ ಶ್ರೀಮಂತ ಆಗಬೇಕು ಎಂಬ ಆಸೆ ಕೆಲವರಲ್ಲಿ ಇರುತ್ತದೆ. ಚಿತ್ರದ ಕಥೆ ಅಂಥವರ ಸುತ್ತ ಸಾಗುತ್ತದೆ’ ಎಂದು ಹೇಳುವ ಮೂಲಕ ಸಿನಿಮಾದ ಒಂದು ಎಳೆಯನ್ನು ಬಿಟ್ಟುಕೊಟ್ಟರು.

ಈ ಚಿತ್ರದ ಚಿತ್ರೀಕರಣವು ಬೆಂಗಳೂರು, ತುಮಕೂರು, ಕಾರವಾರ ಮತ್ತು ಶಿವಮೊಗ್ಗದಲ್ಲಿ ನಡೆದಿದೆ. ಚಿತ್ರದಲ್ಲಿ ಆರು ಹಾಡುಗಳು ಇರಲಿವೆ. ರಶ್ಮಿತಾ ಅವರು ಚಿತ್ರದ ನಾಯಕಿ. ‘ಕಥೆ ಆಕರ್ಷಕವಾಗಿತ್ತು. ಇಂತಹ ಸಿನಿಮಾ ಮಾಡುವವರ ಸಂಖ್ಯೆ ಕಡಿಮೆ ಇದೆ’ ಎಂದರು ರಶ್ಮಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.