ADVERTISEMENT

ಮತ್ತೊಂದು ಥ್ರಿಲ್ಲರ್ ಚಿತ್ರದಲ್ಲಿ ನಯನತಾರಾ: ಒ2 ಟೀಸರ್ ಬಿಡುಗಡೆ

ಐಎಎನ್ಎಸ್
Published 16 ಮೇ 2022, 10:22 IST
Last Updated 16 ಮೇ 2022, 10:22 IST
ನಯನತಾರಾ
ನಯನತಾರಾ   

ಹೈದರಾಬಾದ್: ಮಹಿಳಾ ಪ್ರಧಾನ ಚಿತ್ರಗಳಲ್ಲಿ ಇತ್ತೀಚೆಗೆ ಹೆಚ್ಚು ಮಿಂಚುತ್ತಿರುವ ನಟಿ ನಯನತಾರಾ ಅವರ ಮತ್ತೊಂದು ಥ್ರಿಲ್ಲರ್ ಚಿತ್ರ ‘ಒ2’ ಟೀಸರ್ ಬಿಡುಗಡೆಯಾಗಿದೆ.

ಜಿಎಸ್ ವಿಘ್ನೇಶ್ ನಿರ್ದೇಶನದ ಈ ಚಿತ್ರ ಶೀಘ್ರದಲ್ಲೇ ಹಾಟ್‌ಸ್ಟಾರ್‌ನಲ್ಲಿ ತಮಿಳು, ತೆಲುಗು ಹಾಗೂ ಮಲೆಯಾಳಂನಲ್ಲಿ ಬಿಡುಗಡೆಯಾಗಲಿದೆ. ಟೀಸರ್ ನೋಡುಗರ ಗಮನ ಸೆಳೆದಿದ್ದು, ಥ್ರಿಲ್ಲರ್ ಕಥಾ ಹಂರವನ್ನು ಹೊಂದಿರುವುದು ತೋರುತ್ತದೆ. ಈ ಸಿನಿಮಾವನ್ನು ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ವಿಶಾಲ್ ಚಂದ್ರಶೇಖರ್ ಸಂಗೀತ ನೀಡಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಧೋನಿ ನಿರ್ಮಾಣದ ಚೊಚ್ಚಲ ತಮಿಳು ಚಿತ್ರದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ನಯನತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ನಿಟ್ಟಿನಲ್ಲಿ ಧೋನಿ ಅವರು ಈಗಾಗಲೇ ಮೆಗಾಸ್ಟಾರ್ ರಜನಿಕಾಂತ್ ಆಪ್ತರಲ್ಲಿ ಒಬ್ಬರಾದ ಸಂಜಯ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ನಯನತಾರಾ ಅವರ ಪತಿ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಧೋನಿ ಕಟ್ಟಾ ಅಭಿಮಾನಿಯಾಗಿದ್ದು, ಈ ಚಿತ್ರದಲ್ಲಿ ಧೋನಿ ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.'ಎಂ.ಎಸ್.ಧೋನಿ - ದಿ ಅನ್‌ಟೋಲ್ಡ್ ಸ್ಟೋರಿ' ತಮಿಳುನಾಡಿನಲ್ಲಿ ಸೂಪರ್ ಹಿಟ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.