ADVERTISEMENT

Sandalwood | ‘ನೀತಿ’ ಸಿನಿಮಾದಲ್ಲಿ ಖುಷಿ ರವಿ

​ಪ್ರಜಾವಾಣಿ ವಾರ್ತೆ
Published 26 ಮೇ 2025, 23:30 IST
Last Updated 26 ಮೇ 2025, 23:30 IST
ಖುಷಿ ರವಿ 
ಖುಷಿ ರವಿ    

‘ಅಯ್ಯನ ಮನೆ’ ವೆಬ್‌ ಸರಣಿಯ ಬೆನ್ನಲ್ಲೇ ನಟಿ ಖುಷಿ ರವಿ ನಟಿಸಿರುವ ‘ನೀತಿ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಗೌತಂ ಮಣಿವಣ್ಣನ್ ಈ ಸಿನಿಮಾವನ್ನು ಡೈರೆಕ್ಟರ್ಸ್‌ ಕಟ್‌ ಪ್ರೊಡಕ್ಷನ್‌ನಡಿ ನಿರ್ಮಾಣ ಮಾಡಿದ್ದು, ರಾಜ್‌ಗೋಪಾಲ್‌ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 

‘ದಿಯಾ’ ಸಿನಿಮಾ ಮೂಲಕ ಪ್ರೇಕ್ಷಕರನ್ನು ಸೆಳೆದ ಖುಷಿ ರವಿ ಬಳಿಕ ‘ಕೇಸ್‌ ಆಫ್‌ ಕೊಂಡಾಣ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಜೀ5ನಲ್ಲಿ ಬಂದ ‘ಅಯ್ಯನ ಮನೆ’ ವೆಬ್‌ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿದ್ದ ಖುಷಿ ಸದ್ಯ ‘ಸನ್‌ ಆಫ್‌ ಮುತ್ತಣ್ಣ’, ‘ಫುಲ್‌ ಮೀಲ್ಸ್‌’ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದರ ಜೊತೆಗೆ ‘ನೀತಿ’ ಸಿನಿಮಾವೂ ಇದೇ ವರ್ಷ ತೆರೆಕಾಣಲಿದೆ. ಭಾವನಾತ್ಮಕ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳನ್ನು ಹೊಂದಿರುವ ‘ನೀತಿ’ ಸಿನಿಮಾ, ಒಂದು ದಿನ ಬಂಗಲೆಯಲ್ಲಿ ಎರಡು ಪಾತ್ರಗಳ ಸುತ್ತ ಸುತ್ತುವ ಕಥೆಯಾಗಿದೆ. ಒಬ್ಬಂಟಿ ಮಹಿಳೆಯ ತೊಳಲಾಟ, ಅಪರಿಚಿತ ವ್ಯಕ್ತಿಯ ಆಗಮನದ ಮೂಲಕ ಕಥೆ ತೆರೆದುಕೊಳ್ಳುತ್ತದೆ ಎಂದಿದೆ ಚಿತ್ರತಂಡ. 

ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟ ಸಂಪತ್‌ ಮೈತ್ರೇಯ ಅಭಿನಯಿಸಿದ್ದು, ಪ್ರವೀಣ್ ಅಥರ್ವ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ರೂಸಿಕ್ ಸಂಗೀತ ಸಂಯೋಜಿಸಿದ್ದು, ಪ್ರದೀಪ್ ಪದ್ಮಕುಮಾರ್ ಛಾಯಾಚಿತ್ರಗ್ರಹಣ, ಆರ್.ರಾಜ್‌ಕುಮಾರ್ ಸಂಕಲನ ಚಿತ್ರಕ್ಕಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.