ವಿಭಿನ್ನ ಶೀರ್ಷಿಕೆಯಿಂದ ಗಮನ ಸೆಳೆದಿರುವ ‘ಅವನಿರಬೇಕಿತ್ತು’ ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘ಅಂದಕಾಲತ್ತಿಲ್ಲೆ’ ಎಂಬ ರೆಟ್ರೋ ಶೈಲಿಯ ಹಾಡನ್ನು ನಟ ಶ್ರೀಮುರಳಿ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
‘ಹಾಡಿನ ಸಾಹಿತ್ಯ ಹೊಸತಾಗಿದೆ. ಟ್ರೆಂಡ್ ಸೆಟ್ ಮಾಡುವ ಹಾಡಿದು. ಹೊಸಬರ ಈ ಯತ್ನಕ್ಕೆ ಒಳಿತಾಗಲಿ’ ಎಂದರು ಶ್ರೀಮುರಳಿ. ಅಶೋಕ್ ಸಾಮ್ರಾಟ್ ನಿರ್ದೇಶನದ ಚಿತ್ರಕ್ಕೆ ನೋವಿಕಾ ಸಿನಿ ಕ್ರೀಯೆಶನ್ ಅಡಿಯಲ್ಲಿ ಮುರಳಿ ಬಿ.ಟಿ. ಬಂಡವಾಳ ಹೂಡಿದ್ದಾರೆ.
ಈ ಹಾಡಿಗೆ ವಿಜಯ ಪ್ರಕಾಶ್ ಧ್ವನಿಯಾಗಿದ್ದು, ಲೋಕಿ ತವಸ್ಯ ಸಂಗೀತವಿದೆ. ದೇವರಾಜ್ ಪೂಜಾರಿ , ಪೃಥ್ವಿ ಮಾಲೂರ್ ಛಾಯಾಚಿತ್ರಗ್ರಹಣವಿದೆ. ಸೌಮ್ಯ ಜಾನ್,ಜೈ ಸಿಂಹ, ಪ್ರಶಾಂತ್ ಸಿದ್ದಿ, ಕಿರಣ್ ನಾಯ್ಕ್ ಮುಂತಾದವರು ಚಿತ್ರದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.