ADVERTISEMENT

ಸೂರ್ಯ ಅಭಿನಯದ #NGK ಟ್ರೇಲರ್‌ 14ರಂದು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 20:00 IST
Last Updated 11 ಫೆಬ್ರುವರಿ 2019, 20:00 IST
ಸೂರ್ಯ
ಸೂರ್ಯ   

ಸಿನಿಮಾದ ಉದ್ದುದ್ದ ಹೆಸರುಗಳನ್ನು ಚುಟುಕಾಗಿ ಹೇಳುವುದು ಈಗಿನ ಟ್ರೆಂಡ್‌. ಇದಕ್ಕೆ ಹೊಸ ಸೇರ್ಪಡೆ ತಮಿಳಿನ ‘ನಂದಗೋಪಾಲನ್‌ ಕುಮಾರನ್‌’. ಅಷ್ಟುದ್ದ ಈ ಶೀರ್ಷಿಕೆಯನ್ನು ಕಾಲಿವುಡ್‌ನಲ್ಲಿ #NGK ಎಂದೇ ಕರೆಯಲಾಗುತ್ತಿದೆ.

#NGKಯ ಟ್ರೇಲರ್‌ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸೆಲ್ವರಾಘವನ್ ಪ್ರಕಟಿಸಿದ್ದಾರೆ. ಈ ಹಿಂದೆ ದಿನಾಂಕವನ್ನಷ್ಟೇ ಪ್ರಕಟಿಸಲಾಗಿತ್ತು. ಇದೀಗ, ಪ್ರೇಮಿಗಳ ದಿನದ ಸಂಜೆ 6ಕ್ಕೆ ಟ್ರೇಲರ್‌ ವೀಕ್ಷಿಸಿ ಎಂದು ಪ್ರೀತಿಯ ಫರ್ಮಾನು ಹೊರಡಿಸಿದ್ದಾರೆ.

ರಾಜಕೀಯ ಕಥಾವಸ್ತುವುಳ್ಳ ಚಿತ್ರ ಇದು ಎನ್ನಲಾಗುತ್ತಿದೆ. ಆದರೆ ನಂದಗೋಪಾಲನ್‌ ಕುಮಾರನ್‌ ಎಂಬ ಹೆಸರು ಯಾವುದೇ ರಾಜಕಾರಣಿಗೆ ಸಂಬಂಧಿಸಿದ್ದಲ್ಲ. ನಾಯಕ ಎನ್‌ಜಿಕೆ, ತಮ್ಮ ಸಂಪ್ರದಾಯಸ್ಥ ಕುಟುಂಬದ ಕಟ್ಟುಪಾಡು ಮತ್ತು ಪರಂಪರೆಗಳ ವಿರುದ್ಧ ಸೆಟೆದು ತನ್ನಿಷ್ಟದಂತೆ ಸಮಕಾಲೀನ ಬದುಕನ್ನು ಅಪ್ಪಿಕೊಳ್ಳುವವನು. ಮುಂದೆ ಅವನು ರಾಜಕೀಯ ರಂಗಕ್ಕೂ ಕಾಲಿಡುತ್ತಾನೆ. ಇದೇ ಎಳೆಯಂತೆ ಚಿತ್ರಕತೆ ಸಾಗುತ್ತದೆ ಎನ್ನಲಾಗಿದೆ.

ADVERTISEMENT

ಇದೇ ಮೊದಲ ಬಾರಿಗೆ ಸೂರ್ಯ ಮತ್ತು ಸೆಲ್ವರಾಘವನ್‌ ಒಂದಾಗುತ್ತಿದ್ದಾರೆ. ರಕುಲ್‌ ಪ್ರೀತ್‌ ಸಿಂಗ್‌, ಜಗಪತಿ ಬಾಬು ಮತ್ತು ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕತೆಯೂ ಸೆಲ್ವರಾಘವನ್‌ ಅವರದೇ. ಎಸ್.ಆರ್. ಪ್ರಕಾಶ್‌ಬಾಬು ಮತ್ತು ಎಸ್.ಆರ್.ಪ್ರಭು ನಿರ್ಮಾಣದ ಈ ಚಿತ್ರಕ್ಕೆ ಯುವಾನ್‌ ಶಂಕರ್‌ ರಾಜಾ ಅವರ ಸಂಗೀತ ನಿರ್ದೇಶನವಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.