ADVERTISEMENT

ಯಾವುದೇ ಪಕ್ಷ, ವ್ಯಕ್ತಿಯ ಪರ ಪ್ರಚಾರ ಮಾಡಲ್ಲ: ಶಿವರಾಜಕುಮಾರ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 17:42 IST
Last Updated 31 ಮಾರ್ಚ್ 2019, 17:42 IST
   

ಕೊಳ್ಳೇಗಾಲ: ಲೋಕಸಭಾ ಚುನಾವಣೆಗೆ ಯಾವುದೇ ಪಕ್ಷದ ಪರ ಹಾಗೂ ಯಾವ ವ್ಯಕ್ತಿಯ ಪರವೂ ಪ್ರಚಾರ ಮಾಡುವುದಿಲ್ಲ. ರಾಜಕೀಯದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದೇನೆ ಎಂದು ಚಲನಚಿತ್ರ ನಟ ಶಿವರಾಜಕುಮಾರ್ ಹೇಳಿದರು.

ತಾಲ್ಲೂಕಿನ ಸತ್ತೇಗಾಲ ಸಮೀಪವಿರುವ ಶಿವನಸಮುದ್ರದ ಸಮೂಹ ದೇವಾಲಯಗಳಾದ ಜಗನ್ಮೋಹನ ರಂಗನಾಥಸ್ವಾಮಿ ದೇವಾಲಯ, ಸೋಮೇಶ್ವರ ಪ್ರಸನ್ನ ಮೀನಾಕ್ಷಿ (ಶ್ರೀ ಚಕ್ರ) ಹಾಗೂ ಆದಿಶಕ್ತಿ ಶಿವನ ಸಮುದ್ರದ ಮಾರಮ್ಮ ದೇವಾಲಯಗಳಿಗೆ ದಂಪತಿ ಸಮೇತ ಭೇಟಿ ನೀಡಿ ಪೊಜೆ ಸಲ್ಲಿಸಿದರು. ಪೂಜೆ ಸಲ್ಲಿಸುವ ಮೊದಲು ಕಾವೇರಿ ನದಿಯಲ್ಲಿ ಸ್ನಾನ ಮಾಡಿ ನಂತರ ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಪ್ರತಿ ವರ್ಷ ಇಲ್ಲಿನ ಸಮೂಹ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಅಭಿಮಾನಿಗಳಿಗೆ ಊಟ ಹಾಕಿಸುವುದು ವಾಡಿಕೆ. ನಮ್ಮ ತಾಯಿಯವರ ನಿಧನದ ನಂತರ ಇಲ್ಲಿಗೆ ಬರಲಾಗಿರಲಿಲ್ಲ. ಈಗ ಬಂದು ಪೂಜೆ ಸಲ್ಲಿಸಿದ್ದೇವೆ. ಆದರೆ ಚುನಾವಣೆ ನೀತಿಸಂಹಿತೆ ಇರುವುದರಿಂದ ಅಭಿಮಾನಿಗಳಿಗೆ ಊಟ ಹಾಕಿಸಲು ಸಾಧ್ಯವಾಗಿಲ್ಲ. ಚುನಾವಣೆ ಮುಗಿದ ನಂತರ ಮತ್ತೆ ಬಂದು ಅಭಿಮಾನಿಗಳಿಗೆ ಊಟ ಹಾಕಿಸುವೆ ಎಂದು ತಿಳಿಸಿದರು.

ಡಾ.ಶಿವರಾಜಕುಮಾರ್ ತಾಲ್ಲೂಕು ಸಂಘದ ಅಧ್ಯಕ್ಷ ಪ್ರಭು, ಬೇಂದ್ರೆ ಸಂಘದ ಅಧ್ಯಕ್ಷ ಚಂದ್ರಚೂಡಿ, ಮುಡಿಗುಂಡ ಮೂರ್ತಿ, ಜಯಪ್ರಕಾಶ್, ಸಮೂಹ ದೇವಾಲಯಗಳ ಅರ್ಚಕರಾದ ಪ್ರಭಾಕರ್, ಮಾಧವ ಭಟ್, ಶ್ರೀಧರ್ ಆಚಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.