ಪ್ರತೀಕ್ ಸ್ಮಿತಾ ಪಾಟೀಲ
ಅಬ್ಬಾ, ಸದ್ಯ #Metoo ಚಳವಳಿ ಬಂದು ನಾವೆಲ್ಲ ಬಚಾವಾದಂತೆ ಆಯ್ತು. ಮೊದಲೆಲ್ಲ ಅದೆಷ್ಟು ಖುಲ್ಲಂಖುಲ್ಲಾ ತೊಂದರೆ ಕೊಡ್ತಿದ್ರು, ಬಹುತೇಕ ಜನರು ನನ್ನನ್ನ ಗೇ ಅಂತಂದುಕೊಂಡಿದ್ರು‘ ಎಂದು ಪ್ರತೀಕ್ ಸ್ಮಿತಾ ಪಾಟೀಲ ಪಾಡ್‌ಕಾಸ್ಟ್ ಒಂದರ ಸಂದರ್ಶನದಲ್ಲಿ ನಿಟ್ಟುಸಿರು ಬಿಟ್ಟಿದ್ದಾರೆ.
20ರ ಹರೆಯದಲ್ಲಿದ್ದಾಗ ಪುರುಷರು ನನ್ನತ್ತ ದಿಟ್ಟಿಸುತ್ತಿದ್ದರು. ಲೈಂಗಿಕವಾಗಿರುವ ಅಂಥ ನೋಟಗಳನ್ನು ಎದುರಿಸುವುದೇ ಹಿಂಸೆ ಆಗಿತ್ತು. ಕ್ವೀರ್ ಪಾತ್ರದಲ್ಲಿ ನಟಿಸಿದಾಗಲೂ ಜನರು ನನ್ನನ್ನು ಸಲಿಂಗ ಕಾಮಿ ಎಂದೇ ಭಾವಿಸಿ, ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ನನ್ನ ಬಗೆಗಿನ ಈ ನೋಟ ಕಿರಿಕಿರಿಯಾಗಿದ್ದಂತೂ ಇದೆ.
ಜನರಲ್ಲಿ ಲೈಂಗಿಕತೆಯ ಬಗ್ಗೆ ಮಾತನಾಡುವ ಧೈರ್ಯ ಇಲ್ಲ. ಮುಕ್ತ ಸಮಾಜವೂ ನಮ್ಮದಲ್ಲ. ಆದರೆ ಅಸಹಾಯಕರನ್ನು ಕಂಡಾಗ ದೌರ್ಜನ್ಯ ನಡೆಯುತ್ತವೆ. ಅದು ಪುರುಷರಾಗಲಿ, ಸ್ತ್ರೀಯರಲಾಗಲಿ ತಪ್ಪಿದ್ದಲ್ಲ. ಮೀಟೂನಂತಹ ಚಳವಳಿಗಳು ಹೆಚ್ಚುಹೆಚ್ಚು ಆದಾಗ ಜಾಗೃತಿ ಮೂಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.